ADVERTISEMENT

ಕರ್ತಾರಪುರ ಯಾತ್ರೆಗೆ ಪಾಕಿಸ್ತಾನ ಅವಕಾಶ

ಪಿಟಿಐ
Published 22 ಆಗಸ್ಟ್ 2021, 8:26 IST
Last Updated 22 ಆಗಸ್ಟ್ 2021, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೋವಿಡ್‌ನ ನಾಲ್ಕನೇ ಅಲೆಯನ್ನು ನಿಯಂತ್ರಿಸಲು ತೀವ್ರ ಪ್ರಯತ್ನ ನಡೆದಿರುವಂತೆಯೇ, ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹೀಬ್‌ಗೆ ಭೇಟಿ ನೀಡುವುದಕ್ಕೆ ಸಿಖ್‌ ಯಾತ್ರಿಕರಿಗೆಅವಕಾಶ ನೀಡಲಾಗಿದೆ.

ಶನಿವಾರ ಇಲ್ಲಿ ನಡೆದ ನ್ಯಾಷನಲ್‌ ಕಮಾಂಡ್‌ ಆ್ಯಂಡ್ ಆಪರೇಷನ್ ಸೆಂಟರ್‌ನ (ಎನ್‌ಸಿಒಸಿ) ಸಭೆಯಲ್ಲಿ ಕರ್ತಾರಪುರ ಮಂದಿರವನ್ನು ಮುಂದಿನ ತಿಂಗಳು ಯಾತ್ರಿಕರಿಗೆ ಮುಕ್ತಗೊಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ‘ಡಾನ್’ ಪತ್ರಿಕೆ ವರದಿಮಾಡಿದೆ.

ಸಿಖ್ ಯಾತ್ರಿಕರು ಕೆಲವು ಕಟ್ಟುನಿಟ್ಟಿನ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು, ಎರಡೂ ಡೋಸ್ ಲಸಿಕೆ ಪಡೆದವರು ಮತ್ತು 72 ಗಂಟೆಗಳೊಳಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ಹೊಂದಿರುವವರಿಗೆ ಮಾತ್ರ ಗುರುದ್ವಾರಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.