ADVERTISEMENT

Pope Francis Death: ಪೋಪ್‌ ಫ್ರಾನ್ಸಿಸ್‌ ಕೊನೆಯ ಸಂದೇಶವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2025, 11:34 IST
Last Updated 21 ಏಪ್ರಿಲ್ 2025, 11:34 IST
<div class="paragraphs"><p>ಪೋಪ್‌ ಫ್ರಾನ್ಸಿಸ್‌</p></div>

ಪೋಪ್‌ ಫ್ರಾನ್ಸಿಸ್‌

   

ರಾಯಿಟರ್ಸ್‌

ವಾಷಿಂಗ್ಟನ್‌: ಬಡವರ, ದೀನದಲಿತರ ಪರ ದನಿಯಾಗಿದ್ದ ‘ಪೋಪ್‌ ಆಫ್‌ ಸ್ಲಂ’ ಖ್ಯಾತಿಯ ಪೋಪ್‌ ಫ್ರಾನ್ಸಿಸ್‌ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

ADVERTISEMENT

ಶ್ವಾಸಕೋಶದ ಸೋಂಕಿನಿಂದ ಮಾರ್ಚ್‌ 24ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಸಾರ್ವಜನಿಕ ಸಮಾರಂಭಗಳಿಂದ ದೂರವಿದ್ದರು.

ಈಸ್ಟರ್‌ ಭಾನುವಾರದ ಪ್ರಯುಕ್ತ ನಿನ್ನೆ(ಏ.20) ಸೈಂಟ್‌ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು ಅನುಯಾಯಿಗಳಿಗೆ ದರ್ಶನ ನೀಡಿದ್ದರು. ಈ ವೇಳೆ ಪೋಪ್‌ ಫ್ರಾನ್ಸಿಸ್‌ ಅವರ ಪರವಾಗಿ ಮತ್ತೊಬ್ಬರು ಈಸ್ಟರ್‌ ಭಾಷಣವನ್ನು ಓದಿದ್ದಾರೆ.

ತಮ್ಮ ಕೊನೆಯ ಸಂದೇಶದಲ್ಲಿ, ‘ನಾವು ಸಾವಿಗಾಗಿ ಅಲ್ಲ ಬದುಕುವುದಕ್ಕಾಗಿ ಇಲ್ಲಿ ಇದ್ದೇವೆ’ ಎಂದು ತಿಳಿಸಿದ್ದರು.

‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ’ ಎಂದೂ ಹೇಳಿದ್ದರು.

ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ಕರೆ:

‘ಯುದ್ಧದಿಂದ ನಲುಗಿರುವ ಉಕ್ರೇನ್‌ಗೆ ಈಸ್ಟರ್‌ ಉಡುಗೊರೆಯಾಗಿ ಆ ದೇವರು ಶಾಂತಿಯನ್ನು ದಯಪಾಲಿಸಲಿ. ಶಾಶ್ವತ ಶಾಂತಿಗಾಗಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಫಲವಾಗಲಿ’ ಎಂದು ಪ್ರಾರ್ಥಿಸಿದ್ದಾರೆ.

ಯುದ್ಧದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಯುದ್ಧ ನಿಲ್ಲಿಸುವಂತೆ ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.

ಸುಡಾನ್‌ ಮತ್ತು ಮ್ಯಾನ್ಮಾರ್ ಪರವಾಗಿ ಪ್ರಾರ್ಥನೆ:

ತಮ್ಮ ಕೊನೆಯ ಭಾಷಣದಲ್ಲಿ ಮಿಲಿಟರಿ ಸಂಘರ್ಷ ಮತ್ತು ಭೂಕಂಪದಿಂದ ಬಳಲುತ್ತಿರುವ ಮ್ಯಾನ್ಮಾರ್‌ ಜನರಿಗಾಗಿ ಪೋಪ್‌ ಪ್ರಾರ್ಥಿಸಿದ್ದಾರೆ. ಸಂಘರ್ಷ ಅಂತ್ಯ ಕಂಡು ಶಾಂತಿ ನೆಲೆಸಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಭೂಕಂಪದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಿರುವ ಅವರು, ಈ ಸಮಯದಲ್ಲಿ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಇನ್ನೂ, ಹಿಂಸಾಚಾರ, ಸಂಘರ್ಷಕ್ಕೆ ಬಲಿಯಾಗಿರುವ ಆಫ್ರಿಕಾದ ಜನರಿಗೆ ಅದರಲ್ಲಿಯೂ ವಿಶೇಷವಾಗಿ ಕಾಂಗೋ ಗಣರಾಜ್ಯ, ಸುಡಾನ್ ಮತ್ತು ದಕ್ಷಿಣ ಸುಡಾನ್‌ ಜನರಿಗಾಗಿ ಪೋಪ್‌ ಮಿಡಿದಿದ್ದಾರೆ. ಹಿಂಸಾಚಾರ ನಿಂತು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.

ಗಾಜಾದ ಪರಿಸ್ಥಿತಿ ಬಗ್ಗೆ ಕಳವಳ:

ಗಾಜಾದ ಜನರು ಮತ್ತು ಅದರ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಾಕ್ರಾಂತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಅವಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಮತ್ತೊಮ್ಮೆ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.