ನೊಟ್ರೆ-ಡ್ಯಾಮ್ ಡಿ ಕ್ಯಾಥೆಡ್ರಲ್, ಐಫೆಲ್ ಟವರ್
(ಸಂಗ್ರಹ ಚಿತ್ರ)
ಪ್ಯಾರಿಸ್: ಫೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸೂಚಕವಾಗಿ ಫ್ರಾನ್ಸ್‌ನ ಐತಿಹಾಸಿಕ ನೊಟ್ರೆ-ಡ್ಯಾಮ್ ಡಿ ಕ್ಯಾಥೆಡ್ರಲ್ ಚರ್ಚ್‌ನಲ್ಲಿ 88 ಸಲ ಗಂಟೆ ಮೊಳಗಿಸಿ ಅಂತಿಮ ನಮನ ಸಲ್ಲಿಸಲಾಯಿತು.
ಅದೇ ರೀತಿ ವಿಶ್ವ ಪ್ರಸಿದ್ಧ ಐಫೆಲ್ ಟವರ್‌ನ ಲೈಟ್‌ಗಳನ್ನು ಆಫ್ ಮಾಡುವ ಮೂಲಕ ಪೋಪ್‌ಗೆ ಗೌರವ ಸಲ್ಲಿಸಲಾಯಿತು.
ಪೋಪ್ ಫ್ರಾನ್ಸಿಸ್ ನಿಧನದ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆಯನ್ನು ಏರ್ಪಡಿಸಲಾಯಿತು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಇಂದು (ಸೋಮವಾರ) ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಈ ಹಿನ್ನೆಲೆಯಲ್ಲಿ ನೊಟ್ರೆ-ಡ್ಯಾಮ್ ಡಿ ಕ್ಯಾಥೆಡ್ರಲ್ ಚರ್ಚ್‌ನಲ್ಲಿ 88 ಸಲ ಗಂಟೆ ಮೊಳಗಿಸಿ ಅಂತಿಮ ನಮನ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.