
ಪರಮಾಣು
(ಪ್ರಾತಿನಿಧಿಕ ಚಿತ್ರ)
ವಿಯೆನ್ನಾ: ಪರಮಾಣು ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ಇರಾನ್ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯ (ಐಎಇಎ) ಸದಸ್ಯರು ಗುರುವಾರ ಮತ ಚಲಾಯಿಸಿದರು.
‘ಯುರೇನಿಯಂ ದಾಸ್ತಾನು ಸೇರಿ ಪರಮಾಣು ಕಾರ್ಯಕ್ರಮಗಳ ಬಗ್ಗೆ ಇರಾನ್ ಖಚಿತವಾದ ಮಾಹಿತಿ ಒದಗಿಸಬೇಕು. ಇರಾನ್‌ನಲ್ಲಿರುವ ಪರಮಾಣು ಘಟಕಗಳ ಭೇಟಿಗೂ ವಿಶ್ವಸಂಸ್ಥೆಯ ಪರಮಾಣು ನಿಗಾ ಘಟಕದ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಂಪೂರ್ಣ ಮತ್ತು ತ್ವರಿತ ಸಹಕಾರವನ್ನು ಬಯಸುತ್ತೇವೆ’ ಎಂದು ಐಎಇಎ ಹೇಳಿದೆ.
ವಿಶ್ವಸಂಸ್ಥೆಯ ಪರಮಾಣು ನಿಗಾ ಘಟಕದ 19 ರಾಷ್ಟ್ರಗಳ, 35 ಸದಸ್ಯರು ಮತ ಚಲಾಯಿಸಿದ್ದು ನಿರ್ಣಯ ಅಂಗೀಕರಿಸಲಾಗಿದೆ. ರಷ್ಯಾ, ಚೀನಾ ಮತ್ತು ಪಶ್ಚಿಮ ಆಫ್ರಿಕಾದ ನೈಜರ್ ನಿರ್ಣಯವನ್ನು ವಿರೋಧಿಸಿವೆ. 12 ದೇಶಗಳು ಮತದಾನದಿಂದ ದೂರ ಉಳಿದಿದ್ದವು. ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಅಮೆರಿಕ ನಿರ್ಣಯ ಬೆಂಬಲಿಸಿದ್ದವು.
ವಿಶ್ವಸಂಸ್ಥೆಯ ಅಣ್ವಸ್ತ್ರ ನಿಗಾ ಸಂಸ್ಥೆಯು ಬಹುಕಾಲದಿಂದ ಇರಾನ್‌ನ ಪರಮಾಣು ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದೆ.