ADVERTISEMENT

ಅಮೆರಿಕ ರಾಯಭಾರ ಕಚೇರಿ ಇರುವ ಬಾಗ್ದಾದ್‌ನ ಗ್ರೀನ್‌ ಜೋನ್‌ ಮೇಲೆ ರಾಕೆಟ್‌ ದಾಳಿ 

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 6:01 IST
Last Updated 21 ಜನವರಿ 2020, 6:01 IST
ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಜ. 2ರಂದು ಇರಾನ್‌ ಪರ ಗುಂಪುಗಳು ನಡೆಸಿದ್ದ ದಾಳಿಯ ಸನ್ನಿವೇಶ
ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಜ. 2ರಂದು ಇರಾನ್‌ ಪರ ಗುಂಪುಗಳು ನಡೆಸಿದ್ದ ದಾಳಿಯ ಸನ್ನಿವೇಶ    

ಬಾಗ್ದಾದ್‌: ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಸಮೀಪದಲ್ಲೇ ಮಂಗಳವಾರ ಮುಂಜಾನೆ ಮೂರು ರಾಕೆಟ್‌ಗಳು ಬಿದ್ದಿವೆ.

ಈ ಕುರಿತು ಮಾತನಾಡಿರುವ ಇರಾಕ್‌ ಪೊಲೀಸರು, ‘ಮೂರು ಕತ್ಯುಷಾ ರಾಕೆಟ್‌ಗಳು ಗ್ರೀನ್‌ ಜೋನ್‌ಗೆ (ವಿವಿಧ ದೇಶಗಳ ರಾಯಭಾರ ಕಚೇರಿಗಳು, ಸರ್ಕಾರಿ ಕಚೇರಿಗಳೂ ಇರುವ ಪ್ರದೇಶ) ಬಂದು ಬಿದ್ದಿವೆ. ಬಾಗ್ದಾದ್‌ ಹೊರ ವಲಯದ ಜಫರಾನಿಯಾ ಜಿಲ್ಲೆಯಿಂದ ಈ ಮೂರೂ ರಾಕೆಟ್‌ಗಳನ್ನೂ ಉಡಾಯಿಸಲಾಗಿದೆ. ಮೂರರ ಪೈಕಿ ಎರಡು ರಾಕೆಟ್‌ಗಳು ಅಮೆರಿಕ ರಾಯಭಾರ ಕಚೇರಿಗೆ ಸಮೀಪದಲ್ಲೇ ಬಿದ್ದಿವೆ,’ ಎಂದು ಹೇಳಿದ್ದಾರೆ

ಘಟನೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

ಇರಾನ್‌ನ ಖುದ್ಸ್‌ ಪಡೆಯ ಮುಖ್ಯಸ್ಥ ಖಾಸಿಂ ಸುಲೇಮಾನಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ ನಂತರ ಬಾಗ್ದಾದ್‌ ಮೇಲೆ ನಡೆದ ಎರಡನೇ ರಾಕೆಟ್‌ ದಾಳಿ ಇದಾಗಿದೆ. ಇದಕ್ಕೂ ಮೊದಲು ಇರಾಕ್‌ನಲ್ಲಿರುವ ಅಮೆರಿಕ ಸೇನಾ ಪಡೆಗಳ ಮೇಲೆ ಇರಾನ್‌ ದಾಳಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.