ADVERTISEMENT

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ 10 ಕೋಟಿ ಡೋಸ್ ಉತ್ಪಾದಿಸಲು ರಷ್ಯಾ ಒಪ್ಪಿಗೆ

ರಾಯಿಟರ್ಸ್
Published 27 ನವೆಂಬರ್ 2020, 9:46 IST
Last Updated 27 ನವೆಂಬರ್ 2020, 9:46 IST
ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)   

ಮಾಸ್ಕೊ: ಕೋವಿಡ್‌–19 ತಡೆಗೆ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ 10 ಕೋಟಿ ಡೋಸ್‌ಗಳನ್ನು (ವರ್ಷದಲ್ಲಿ) ಭಾರತದಲ್ಲಿ ಉತ್ಪಾದಿಸಲು ರಷ್ಯಾದ ‘ಆರ್‌ಡಿಐಎಫ್‌ ಸಾವರಿನ್ ವೆಲ್ತ್ ಫಂಡ್’ ಜತೆ ಔಷಧ ತಯಾರಿಕಾ ಸಂಸ್ಥೆ ‘ಹೆಟೆರೊ’ ಒಪ್ಪಂದ ಮಾಡಿಕೊಂಡಿದೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ‘ಹೆಟೆರೊ’ ಜತೆಗಿನ ಒಪ್ಪಂದದ ಮೂಲಕ ಆರ್‌ಡಿಐಎಫ್‌ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ವರ್ಷದಲ್ಲಿ ‘ಹೆಟೆರೊ’ ಲಸಿಕೆ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ’ ಎಂಬ ಜಂಟಿ ಹೇಳಿಕೆಯನ್ನು ‘ಸ್ಪುಟ್ನಿಕ್ ವಿ’ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಭಾರತದಲ್ಲಿ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ ಪ್ರಗತಿಯಲ್ಲಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ರಷ್ಯಾದಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆಗೆ ತುರ್ತು ಕಾರ್ಯವಿಧಾನದಡಿಯಲ್ಲಿ ಆಗಸ್ಟ್‌ನಲ್ಲೇ ಅನುಮೋದನೆ ನೀಡಲಾಗಿದ್ದರೂ ಅದರ ಪರಿಣಾಮಕಾರಿತ್ವ, ಸುರಕ್ಷತೆ ಬಗ್ಗೆ ಪ್ರಯೋಗಗಳು ನಡೆಯುತ್ತಲೇ ಇವೆ.

‘ಭಾರತದಲ್ಲಿ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳನ್ನು ನಾವು ಎದುರು ನೋಡುತ್ತಿದ್ದೇವೆ. ಲಸಿಕೆಯ ತ್ವರಿತ ಲಭ್ಯತೆ ನಿಟ್ಟಿನಲ್ಲಿ ಸ್ಥಳೀಯ ಉತ್ಪಾದನೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ನಾವು ಭಾವಿಸುತ್ತೇವೆ’ ಎಂದು ‘ಹೆಟೆರೊ’ದ ಅಂತರರಾಷ್ಟ್ರೀಯ ಮಾರುಕಟ್ಟೆಯ ನಿರ್ದೇಶಕ ಬಿ.ಮುರಳಿಕೃಷ್ಣ ರೆಡ್ಡಿ ಹೇಳಿದ್ದಾರೆ.

‘ಸ್ಪುಟ್ನಿಕ್ ವಿ’ ಲಸಿಕೆ ಶೇ 95ಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಇತ್ತೀಚೆಗೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.