(ರಾಯಿಟರ್ಸ್ ಪ್ರಾತಿನಿಧಿಕ ಚಿತ್ರ)
ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತದ ಔಷಧಿ ಕಂಪನಿಯ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ದೆಹಲಿಯಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಹೇಳಿದೆ.
ಭಾರತದೊಂದಿಗೆ 'ವಿಶೇಷ ಸ್ನೇಹ ಬಾಂಧವ್ಯ ಇದೆ' ಎಂದು ಹೇಳಿಕೊಳ್ಳುತ್ತಿರುವ ರಷ್ಯಾ, ಉಕ್ರೇನ್‌ನಲ್ಲಿ ಭಾರತದ ವ್ಯವಹಾರದ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುತ್ತಿದೆ ಎಂದು ಅದು ಆರೋಪಿಸಿದೆ.
ಕೀವ್‌ನಲ್ಲಿರುವ ಭಾರತದ ಔಷಧ ಕಂಪನಿ 'ಕುಸುಮ್' ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದೆ. ಇಲ್ಲಿನ ಉಗ್ರಾಣದಲ್ಲಿ ಮಕ್ಕಳು ಹಾಗೂ ವೃದ್ಧರಿಗೆ ಔಷಧಿಗಳನ್ನು ಇರಿಸಲಾಗಿತ್ತು ಎಂದು ಅದು ಹೇಳಿದೆ.
ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಉಕ್ರೇನ್ ಸೇರಿ 29 ರಾಷ್ಟ್ರಗಳಲ್ಲಿ ಸೇವೆ ಹೊಂದಿರುವುದಾಗಿ ಕುಸುಮ್ ಹೆಲ್ತ್‌ಕೇರ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.