ADVERTISEMENT

ರಷ್ಯಾ ಸಂಘರ್ಷ: ಝೆಲೆನ್‌ಸ್ಕಿ ಜತೆ ಪ್ರಧಾನಿ ಮಾತುಕತೆ;ಶಾಂತಿಯುತ ಪರಿಹಾರಕ್ಕೆ ಸಲಹೆ

ಝೆಲೆನ್‌ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಪಿಟಿಐ
Published 11 ಆಗಸ್ಟ್ 2025, 15:53 IST
Last Updated 11 ಆಗಸ್ಟ್ 2025, 15:53 IST
 ಝೆಲೆನ್‌ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ (ಹಳೆಯ ಚಿತ್ರ)
 ಝೆಲೆನ್‌ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ (ಹಳೆಯ ಚಿತ್ರ)   

ನವದೆಹಲಿ: ‘ರಷ್ಯಾ ಜೊತೆಗಿನ ಸಂಘರ್ಷ ಕೊನೆಗಾಣಿಸಲು ಶಾಂತಿಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉಕ್ರೇನ್‌ಗೆ ಎಲ್ಲ ರೀತಿಯ ನೆರವು ನೀಡಲು ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿಗೆ ಭರವಸೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ನಡುವೆ ಸಭೆ ನಿಗದಿಯಾಗಿರುವ ಬೆನ್ನಲ್ಲೇ, ಉಭಯ ದೇಶಗಳ ನಾಯಕರು ಫೋನ್‌ನ ಮೂಲಕ ಸಂಭಾಷಣೆ ನಡೆಸಿದ್ದಾರೆ.

‘ಸಂಘರ್ಷದ ಆರಂಭದಿಂದಲೂ ಶಾಂತಿಯುತ ತ್ವರಿತ ಪರಿಹಾರಕ್ಕಾಗಿ ಭಾರತವು ಸತತ ಬೆಂಬಲಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಧನ್ಯವಾದ ಸಲ್ಲಿಕೆ: ‘ಪ್ರಧಾನಿ ನರೇಂದ್ರ ಮೋದಿ ಜೊತೆಗೆ ದ್ವಿಪಕ್ಷೀಯ ಸಹಕಾರ ಸೇರಿದಂತೆ ಸಮಗ್ರ ರಾಜತಾಂತ್ರಿಕ ಸ್ಥಿತಿಗತಿಯ ಕುರಿತಂತೆ ಚರ್ಚಿಸಲಾಯಿತು. ಅದರಲ್ಲೂ, ದೇಶದ ಜನರಿಗೆ ಬೆಂಬಲ ಸೂಚಿಸಿ ಪ್ರಧಾನಿ ಮೋದಿಯವರ ಮಾತುಗಳಿಗೆ ಆಭಾರಿಯಾಗಿದ್ದೇನೆ’ ಎಂದು ಉಕ್ರೇನ್‌ ಅಧ್ಯಕ್ಷ  ವೊಲೊಡಿಮಿರ್‌ ಝೆಲೆನ್‌ಸ್ಕಿಗೆ ತಿಳಿಸಿದ್ದಾರೆ.

‘ಅದೇ ರೀತಿ ರಷ್ಯಾದಿಂದ ಭಾರತವು ಆಮದು ಮಾಡಿಕೊಳ್ಳುತ್ತಿರುವ ತೈಲ ಖರೀದಿಗೆ ಕಡಿವಾಣ ಹಾಕುವ ಅಗತ್ಯವಿದೆ. ಇದರಿಂದ ಯುದ್ಧದ ಮುಂದುವರಿಕೆಗೆ ಹರಿದುಬರುತ್ತಿರುವ ಹಣಕಾಸನ್ನು ಕಡಿಮೆ ಮಾಡಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.