ಕೀವ್: ಹಾರ್ಕಿವ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದ ನಂತರ ರಷ್ಯಾ ಪಡೆಗಳು, ಈ ನಗರದಿಂದ ಈಗ ಹಿಂದೆ ಸರಿಯುತ್ತಿದ್ದು,ಪೂರ್ವ ಡೊನೆಟ್‌ಸ್ಕ್‌ನಲ್ಲಿ ದಾಳಿಗೆ ಗಮನ ಕೇಂದ್ರೀಕರಿಸಿವೆ ಎಂದು ಉಕ್ರೇನ್ ಸೇನೆ ಶನಿವಾರ ಹೇಳಿದೆ.
‘ಉಕ್ರೇನ್ ಪಡೆಗಳನ್ನು ಹತ್ತಿಕ್ಕಲು ಮತ್ತು ರಕ್ಷಣಾ ಕೋಟೆಗಳನ್ನು ನಾಶಮಾಡಲು ಪೂರ್ವ ಡೊನೆಟ್‌ಸ್ಕ್ ಪ್ರದೇಶದಲ್ಲಿ ವಾಯು ಮತ್ತು ಫಿರಂಗಿ ದಾಳಿಯನ್ನು ರಷ್ಯಾ ಪಡೆಗಳು ನಡೆಸುತ್ತಿವೆ. ತಮ್ಮ ಸೇನೆಗೆ ಅಗತ್ಯ ಶಸ್ತ್ರಾಸ್ತ್ರ, ಇಂಧನ ಹಾಗೂ ಆಹಾರ ಸರಬರಾಜಾಗುವ ಮಾರ್ಗಗಳನ್ನು ರಕ್ಷಿಸಿಕೊಳ್ಳುತ್ತಿವೆ’ ಎಂದು ಅದು ಹೇಳಿದೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.