ADVERTISEMENT

'ಐತಿಹಾಸಿಕ ಪ್ರಮಾದ'ವೆಸಗಿದ ರಷ್ಯಾ ಅಧ್ಯಕ್ಷ ಪುಟಿನ್: ಇಮ್ಯಾನುಯೆಲ್‌ ಮ್ಯಾಕ್ರಾನ್

ಏಜೆನ್ಸೀಸ್
Published 4 ಜೂನ್ 2022, 11:13 IST
Last Updated 4 ಜೂನ್ 2022, 11:13 IST
ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್
ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್    

ಪ್ಯಾರಿಸ್: ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 'ಐತಿಹಾಸಿಕ ಪ್ರಮಾದ'ವೆಸಗಿದ್ದಾರೆ ಎಂದು ಫ್ರಾನ್ಸ್‌ ಅಧ್ಯಕ್ಷಇಮ್ಯಾನುಯೆಲ್‌ ಮ್ಯಾಕ್ರಾನ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.

ಫ್ರಾನ್ಸ್‌ನ ಪ್ರಾದೇಶಿಕ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮ್ಯಾಕ್ರಾನ್‌,'ನಿಮ್ಮ ಜನರಿಗೆ, ನಿಮ್ಮ ಪಾಲಿಗೆ ಐತಿಹಾಸಿಕ ಮತ್ತು ಮೂಲಭೂತವಾದ ತಪ್ಪು ಮಾಡಿದ್ದೀರಿ ಎಂದು ಅವರಿಗೆ (ಪುಟಿನ್‌ಗೆ) ಹೇಳಿದ್ದೆ' ಎಂದಿದ್ದಾರೆ.

ಮುಂದುವರಿದು, ‌'ಅವರು (ಪುಟಿನ್‌) ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ ಎಂದು ನನಗನಿಸುತ್ತದೆ' ಎಂದಿರುವ ಮ್ಯಾಕ್ರಾನ್‌, 'ಅವರು ಪ್ರತ್ಯೇಕವಾಗಿ ಉಳಿದುಕೊಳ್ಳುವುದು ಒಂದು ವಿಚಾರ. ಆದರೆ, ಅದರಿಂದ ಹೊರಗೆ ಬರುವ ಮಾರ್ಗ ತುಂಬಾ ಕಠಿಣವಾದದ್ದು' ಎಂದು ಹೇಳಿದ್ದಾರೆ.

ADVERTISEMENT

'ರಷ್ಯಾದ ತೇಜೋವಧೆ ಆಗಬಾರದು. ರಾಜತಾಂತ್ರಿಕ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು' ಎಂದು ಮ್ಯಾಕ್ರಾನ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.