ADVERTISEMENT

ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಪರೀಕ್ಷಾ ಕೊಠಡಿಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯಗೊಳಿಸಿದ ಮುಸ್ಲಿಂ ರಾಷ್ಟ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 6:37 IST
Last Updated 21 ಡಿಸೆಂಬರ್ 2022, 6:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಿಯಾದ್‌: ‍ ಪರೀಕ್ಷಾ ಕೊಠಡಿಗಳಲ್ಲಿ ಹೆಣ್ಣು ಮಕ್ಕಳು ಅಬಯಾ (ಬುರ್ಖಾ ಮಾದರಿಯ ನಿಲುವಂಗಿ) ವಸ್ತ್ರ ಧರಿಸುವುದಕ್ಕೆ ಸೌದಿ ಅರೇಬಿಯಾ ನಿಷೇಧ ಹೇರಿದೆ.

ಗಲ್ಫ್‌ ನ್ಯೂಸ್‌ ಈ ಸುದ್ದಿಯನ್ನು ವರದಿ ಮಾಡಿದೆ.

ಪರೀಕ್ಷಾ ಕೊಠಡಿಗಳಲ್ಲಿ ಅಬಯಾ ಧರಿಸುವಂತಿಲ್ಲ ಎಂದು ಸೌದಿಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ ಆದೇಶ ಹೊರಡಿಸಿದೆ.

ADVERTISEMENT

ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಬೇಕು. ವಸ್ತ್ರ ರಾಜಪ್ರಭುತ್ವದ ಸಾರ್ವಜನಿಕ ಸಭ್ಯತೆಯ ನಿಯಮಾವಳಿಗೆ ಬದ್ಧವಾಗಿರಬೇಕು ಎಂದು ಎಂದು ಅದು ಹೇಳಿದೆ.

ಭಾರತೀಯ ಮುಸಲ್ಮಾನ ಮಹಿಳೆಯರುಬುರ್ಖಾ ಧರಿಸುವಂತೆ, ಮಧ್ಯಪ್ರಾಚ್ಯದ ಬಹುತೇಕ ಕಡೆ, ಉತ್ತರ ಆಫ್ರಿಕಾದಲ್ಲಿ ಹಾಗೂ ಅರೆಬಿಯನ್‌ ಪರ್ಯಾಯ ದ್ವೀಪದಲ್ಲಿ ‘ಅಬಯಾ‘ ಎನ್ನುವ ನಿಲುವಂಗಿಯನ್ನು ಧರಿಸುತ್ತಾರೆ.

2018ರಲ್ಲಿ ‘ಅಬಯಾ‘ ವಸ್ತ್ರ ಕಡ್ಡಾಯವಲ್ಲ ಎಂದು ಸೌದಿ ಆರೇಬಿಯಾ ಘೋಷಣೆ ಮಾಡಿತ್ತು.

ಖಟ್ಟರ್‌ ಇಸ್ಲಾಮಿಕ್‌ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿ, ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಧಿಕಾರ ವಹಿಸಿಕೊಂಡ ಬಳಿಕ, ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವುದು ಸಹಿತ ಹಲವು ಸುಧಾರಣೆಗಳನ್ನು ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.