ADVERTISEMENT

ಉಕ್ರೇನ್‌ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು; ಪಾರ್ಶ್ವವಾಯು ಕಾರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 13:39 IST
Last Updated 2 ಮಾರ್ಚ್ 2022, 13:39 IST
ಮೃತ ವಿದ್ಯಾರ್ಥಿ ಚಂದನ್‌ ಜಿಂದಾಲ್‌
ಮೃತ ವಿದ್ಯಾರ್ಥಿ ಚಂದನ್‌ ಜಿಂದಾಲ್‌    

ನವದೆಹಲಿ: ರಷ್ಯಾದ ಸೇನಾ ಪಡೆಗಳ ದಾಳಿಗೆ ಒಳಗಾಗಿರುವ ಉಕ್ರೇನ್‌ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಬುಧವಾರ ಸಾವಿಗೀಡಾಗಿದ್ದಾರೆ. ಮೃತ ವಿದ್ಯಾರ್ಥಿ ಪಂಜಾಬ್‌ನ ಬರನಾಲಾದ ಚಂದನ್‌ ಜಿಂದಾಲ್‌ (22) ಎಂದು ತಿಳಿದು ಬಂದಿದೆ.

ವಿನಿಟ್ಸಿಯಾ ನಗರದಲ್ಲಿರುವ ವಿನಿಟ್ಸಿಯಾ ನ್ಯಾಷನಲ್ ಪೈರೊಗೊವ್‌ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಂದನ್‌ ವ್ಯಾಸಂಗ ಮಾಡುತ್ತಿದ್ದರು. ಮಿದುಳಿಗೆ ರಕ್ತದ ಸಂಚಾರ ನಿಂತು ಉಂಟಾದ ಪಾರ್ಶ್ವವಾಯುವಿನ ಹೊಡೆತಕ್ಕೆ ಒಳಗಾಗಿದ್ದ ಅವರನ್ನು ವಿನಿಟ್ಸಿಯಾದ ಎಮರ್ಜೆನ್ಸಿ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಬೆಳಿಗ್ಗೆ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಚಂದನ್‌ ಪಾರ್ಥಿವ ಶರೀರವನ್ನು ದೇಶಕ್ಕೆ ತರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ADVERTISEMENT

ನಿನ್ನ ಹಾರ್ಕಿವ್‌ನಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್‌ ಅವರ ಪಾರ್ಥಿವ ಶರೀರವನ್ನು ತರಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಪ್ರಸ್ತುತ ಉಕ್ರೇನ್‌ನಿಂದ ಯಾವುದೇ ಸಾರ್ವಜನಿಕ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದ್ದು, ನೆರೆಯ ರಾಷ್ಟ್ರಗಳ ಮೂಲಕ ಮೃತ ದೇಹ ತರುವ ಪ್ರಯತ್ನ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.