ADVERTISEMENT

PHOTOS | ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಸರಕು ಸಾಗಾಣೆಯ ಹಡಗು; ಸಂಚಾರ ದಟ್ಟಣೆ

ವಿಶ್ವ ಪ್ರಸಿದ್ಧ ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಬೃಹತ್ ಗಾತ್ರದ ಸರಕು ಸಾಗಾಣೆಯ ಹಡಗೊಂದು ಸಿಲುಕಿರುವ ಪರಿಣಾಮ ಸಂಚಾರ ಬಿಕ್ಕಟ್ಟು ಎದುರಾಗಿದೆ. ವಿಶ್ವದ ಅತ್ಯಂತ ನಿಬಿಡ ಕಡಲ ವ್ಯಾಪಾರ ಮಾರ್ಗದಲ್ಲಿ ಎದುರಾಗಿರುವ ಈ ತೊಂದರೆಯಿಂದಾಗಿ ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 10:23 IST
Last Updated 25 ಮಾರ್ಚ್ 2021, 10:23 IST
224,000 ಟನ್ ಭಾರದ ಸರಕು ಸಾಗಾಣೆಯ ಹಡಗು ಸುಯೆಜ್ ಕಾಲುವೆಯಲ್ಲಿ ಹಾನಿಗೊಳಗಾಗಿದೆ.
224,000 ಟನ್ ಭಾರದ ಸರಕು ಸಾಗಾಣೆಯ ಹಡಗು ಸುಯೆಜ್ ಕಾಲುವೆಯಲ್ಲಿ ಹಾನಿಗೊಳಗಾಗಿದೆ.   
ಯುರೋಪಿನ ಬಾಹ್ಯಾಕಾಶ ಏಜೆನ್ಸಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರ
ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಮಹಾಕಾಲುವೆಯಾಗಿದೆ.
ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ಪ್ರಯಾಣಿಸುವ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತುವರಿಯದೇ ನೇರವಾಗಿ ಹೋಗಬಹುದಾಗಿದೆ.
ಬೃಹತ್ ಕಂಟೇನರ್ ಹಡಗು ಸಿಲುಕಿರುವ ಪರಿಣಾಮ ಜಾಗತಿಕ ಶಿಪ್ಪಿಂಗ್ ವ್ಯವಸ್ಧೆಗೆ ಅಡ್ಡಿಯುಂಟಾಗಿದೆ.
ಟಗ್ ಬೋಟ್‌ಗಳ ಸಹಾಯದಿಂದ ಹಡಗನ್ನು ಸರಿಸುವ ಪ್ರಯತ್ನ ನಡೆಯುತ್ತಿದೆ.
ಕಳೆದ ವರ್ಷ ಸುಮಾರು 19,000 ಹಡಗುಗಳು ಸುಯೆಜ್ ಕಾಲುವೆಯ ಮೂಲಕ ಹಾದು ಹೋಗಿದ್ದವು.
ಜಾಗತಿಕ ಸರಕು ಸಾಗಾಣೆಯ ವ್ಯಾಪಾರಕ್ಕೆ ಸುಯೆಜ್ ಕಾಲುವೆ ಅತಿ ನಿರ್ಣಾಯಕವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.