ADVERTISEMENT

ಭಯೋತ್ಪಾದನೆ ಮಾನವೀಯತೆಗೆ ಬಹು ದೊಡ್ಡ ಅಪಾಯ: ಜಿ20 ಶೃಂಗದಲ್ಲಿ ಮೋದಿ ಕಳವಳ 

ಭಯೋತ್ಪಾದನೆ ಮಟ್ಟ ಹಾಕಲು ಕೈಜೋಡಿಸುವಂತೆ ವಿಶ್ವ ನಾಯಕರಿಗೆ ಕರೆ

ಏಜೆನ್ಸೀಸ್
Published 28 ಜೂನ್ 2019, 5:41 IST
Last Updated 28 ಜೂನ್ 2019, 5:41 IST
ಜಿ20 ಶೃಂಗಸಭೆಗೂ ಮುನ್ನ ನಡೆದ ಪ್ರತ್ಯೇಕ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೊದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಸ್ತಲಾಘವ ಮಾಡಿದರು.
ಜಿ20 ಶೃಂಗಸಭೆಗೂ ಮುನ್ನ ನಡೆದ ಪ್ರತ್ಯೇಕ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೊದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಸ್ತಲಾಘವ ಮಾಡಿದರು.   

ಒಸಾಕಾ(ಜಪಾನ್‌):‘ಜಾಗತಿಕವಾಗಿ ವ್ಯಾಪಿಸಿರುವ ಭಯೋತ್ಪಾದನೆಯು ಮಾನವೀಯತೆಗೆ ಬಹು ದೊಡ್ಡ ಅಪಾಯಕಾರಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿರುವಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದನೆ ಮಟ್ಟ ಹಾಕಲು ಎಲ್ಲರೂ ಕೈಜೋಡಿಸುವಂತೆ ವಿಶ್ವ ನಾಯಕರಿಗೆ ಕರೆ ನೀಡಿದ್ದಾರೆ.

28–29ರಂದು ಇಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗಾಗಿ ಮೋದಿ ಅವರು ಜಪಾನ್‌ಗೆ ಭೇಟಿ ಕೊಟ್ಟಿದ್ದು, ಶೃಂಗಸಭೆಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಪ್ರಂಪ್‌ ಸೇರಿದಂತೆ ವಿವಿಧ ರಾಷ್ಟ್ರ ನಾಯಕರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಭಯೋತ್ಪಾದನೆ ಅಮಾಯಕರ ಬದುಕನ್ನೇ ಕಿತ್ತುಕೊಳ್ಳುವುದು ಮಾತ್ರವಲ್ಲ, ಇದು ಆರ್ಥಿಕ ಬೆಳವಣಿಗೆ ಮತ್ತು ಕೋಮು ಸೌಹಾರ್ದದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಭಯೋತ್ಪಾದನೆ ಮತ್ತು ವರ್ಣಭೇದ ನೀತಿಗೆ ಬೆಂಬಲ ನೀಡುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಬೇಕಿದೆ ಎಂದು ಎಚ್ಚರಿಸಿದರು.

ADVERTISEMENT

ವಿಶ್ವಮಟ್ಟದ ಮೂರು ಪ್ರಮುಖ ಸವಾಲುಗಳನ್ನು ವಿವರಿಸಿದಮೋದಿ, ಆ ಸವಾಲುಗಳನ್ನು ನಿಭಾಯಿಸಲು ಐದು ಸಲಹೆಗಳನ್ನು ನೀಡಿದರು.

ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆ ನಂತರ ಪ್ರಧಾನಿ ಮೋದಿ, ಬ್ರಿಕ್ಸ್ ನಾಯಕರೊಂದಿಗೆ ಸಭೆ ನಡೆಸಿ ವಿಶ್ವ ವ್ಯಾಪರ ಸಂಸ್ಥೆ(ಡಬ್ಲ್ಯುಟಿಒ)ಬಲಪಡಿಸುವುದು, ವ್ಯಾಪಾರದಲ್ಲಿ ರಕ್ಷಣಾತ್ಮಕತೆ ಬಗ್ಗೆ ಹೋರಾಡುವುದು, ಇಂಧನ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಒಟ್ಟಾಗಿ ಕೆಲಸ ಮಾಡುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ವ್ಯಾಪಾರ ಮತ್ತು ಆರ್ಥಿಕ ವಿಷಯಗಳ ಕುರಿತು ದ್ವಿಪಕ್ಷೀಯ ಸಂಬಂಧದಲ್ಲಿ ಉದ್ಧವಿಸಿರುವ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ–ಟ್ರಂಪ್‌ ನಡುವಿನ ಸಭೆ ಮಹತ್ವ ಪಡೆದುಕೊಂಡಿದೆ.

ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮರು ಆಯ್ಕೆಯಾದ ನಂತರ ಅವರ ಮೊದಲ ಸಭೆ ಇದಾಗಿದೆ. ಮೋದಿ ಮತ್ತು ಟ್ರಂಪ್‌ ಅವರು ವ್ಯಾಪಾರ, ರಕ್ಷಣೆ, ಇರಾನ್ ಮತ್ತು ‘5ಜಿ’ ತರಂಗಾಂತರ ಜಾಲ ಸೇರಿದಂತೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳನ್ನು ಒಳಗೊಂಡಂತೆ ಹಲವು ವಿಷಯ ಕುರಿತು ಮಾತನಾಡಿದರು. ಜಪಾನ್–ಅಮೆರಿಕ–ಭಾರತ ತ್ರಿಪಕ್ಷೀಯರೂ ಮೋದಿ, ಟ್ರಂಪ್ ಮತ್ತು ಶಿಂಜೊ ಅಬೆ ಸಭೆಯಲ್ಲಿ ಭೇಟಿಯಾದರು. ನಂತರ, ಪ್ರತ್ಯೇಕವಾಗಿ ಪರಸ್ಪರ ಮಾತುಕತೆ ನಡೆಸಿದರು.

‘5ಜಿ’ ತರಂಗಾಂತರಗಳ ಮುನ್ನೆಚ್ಚರಿಕೆ ಮತ್ತು ಸುರಕ್ಷತೆಯನ್ನು ನಾವು ಖಚಿತ ಖಚಿತಪಡಿಸಿಕೊಳ್ಳಬೇಕು. ಇದು ನಮ್ಮ ಭದ್ರತೆಗೆ ಅತ್ಯಂತ ಅವಶ್ಯವಾದುದಾಗಿದೆ. ಡಿಜಿಟಲ್‌ ವ್ಯಾಪಾರವನ್ನು ನಿರ್ಬಂಧಿಸಲು ಮತ್ತು ಗೋಪ್ಯತೆ ಮತ್ತು ಬೌದ್ಧಿಕ ಸಂಪತ್ತಿನ ರಕ್ಷಣೆಯನ್ನು ಉಲ್ಲಂಘಿಸಲು ಬಳಸಲಾಗುವ ಡೇಟಾ(ದತ್ತಾಂಶ) ಸ್ಥಳೀಕರಣ ಮತ್ತು ನೀತಿಗಳನ್ನು ಅಮೆರಿಕ ವಿರೋಧಿಸುತ್ತದೆ’ ಎಂದು ಅಮೆರಿಕ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೊದಿ ಅವರು ವಿವಿಧ ರಾಷ್ಟ್ರಗಳ ನಾಯಕರ ಜತೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.