ಹೋಳಿ
ಹೂಸ್ಟನ್: ಬಣ್ಣಗಳ ಹಬ್ಬ ಹೋಳಿಯನ್ನು ಟೆಕ್ಸಾಸ್‌ನ ಸೆನೆಟ್ ಅಧಿಕೃತವಾಗಿ ಗುರುತಿಸಿ, ಅದು ಮಹತ್ವದ ಸಾಂಸ್ಕೃತಿಕ ಆಚರಣೆ ಎಂದು ನಿರ್ಣಯವನ್ನು ಅಂಗೀಕರಿಸಿದೆ.
ಇದರೊಂದಿಗೆ ಜಾರ್ಜಿಯಾ, ನ್ಯೂಯಾರ್ಕ್‌ನ ಬಳಿಕ ಹೋಳಿ ಹಬ್ಬಕ್ಕೆ ಅಧಿಕೃತ ಆಚರಣೆಯ ಮಾನ್ಯತೆ ನೀಡಿರುವ ಅಮೆರಿಕದ ಮೂರನೇ ರಾಜ್ಯ ಟೆಕ್ಸಾಸ್ ಆಗಿದೆ.
ಮಾರ್ಚ್ 14ರ ಹೋಳಿ ಹಬ್ಬಕ್ಕಿಂತ ಮುಂಚೆ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.