ADVERTISEMENT

ಅಮೆರಿಕ ವಶಕ್ಕೆ ಪಡೆದ ರಷ್ಯಾ ಹಡಗಿನಲ್ಲಿರುವ ಮೂವರು ಭಾರತೀಯರ ಬಿಡುಗಡೆಗೆ ಮನವಿ

ಪಿಟಿಐ
Published 9 ಜನವರಿ 2026, 2:23 IST
Last Updated 9 ಜನವರಿ 2026, 2:23 IST
<div class="paragraphs"><p>ಅಮೆರಿಕ ಕೋಸ್ಟ್ ಗಾರ್ಡ್</p></div>

ಅಮೆರಿಕ ಕೋಸ್ಟ್ ಗಾರ್ಡ್

   

(ರಾಯಿಟರ್ಸ್ ಚಿತ್ರ)

ಮಾಸ್ಕೊ: ಅಮೆರಿಕ ವಶಪಡಿಸಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್‌ ಇದ್ದ ಹಡಗಿನಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಈ ಸಂಬಂಧ ತನ್ನ ಪ್ರತಿಭಟನೆ ದಾಖಲಿಸಿರುವ ರಷ್ಯಾ, ಸಾಗರಯಾನ ನಿಯಮ ಸಂಬಂಧ ಅಮೆರಿಕ ಅಂತರರಾಷ್ಟ್ರೀಯ ಕಾನೂನು ಪಾಲಿಸುವಂತೆಯೂ, ನವವಸಾಹತುಶಾಹಿ ನೀತಿಯನ್ನು ಬಿಟ್ಟುಬಿಡುವಂತೆ ಕರೆ ನೀಡಿದೆ.

ಮರಿನೆರಾ ಹಡಗಿನಲ್ಲಿ ಉಕ್ರೇನ್‌ನ 17, ಜಾರ್ಜಿಯಾದ ಆರು, ಭಾರತದ ಮೂವರು ಮತ್ತು ರಷ್ಯಾದ ಇಬ್ಬರು ಸಿಬ್ಬಂದಿ ಇದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ 'ರಷ್ಯಾ ಟುಡೇ' ವರದಿ ಮಾಡಿದೆ.

'ಬೆಲ್ಲಾ-1' ಎನ್ನುವ 'ಮರಿನೆರಾ' ಹಡಗಿನ ಕುರಿತು ಪದೇ ಪದೇ ಮಾಹಿತಿ ನೀಡಿರುವ ಹೊರತಾಗಿಯೂ ಉತ್ತರ ಅಟ್ಲಾಂಟಿಕ್‌ನಲ್ಲಿ ಅಮೆರಿಕದ ಕೋಸ್ಟ್ ಗಾರ್ಡ್‌ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ಹೊರತಾಗಿಯೂ ಅಮೆರಿಕದ ಕ್ರಮವನ್ನು ರಷ್ಯಾ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ.

ವೆನೆಜುವೆಲಾದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸ್ಥಾಪಿಸುವ ಅಮೆರಿಕದ ಹುನ್ನಾರದ ಭಾಗವಾಗಿ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಅಮೆರಿಕದ ಕೆಲವು ಅಧಿಕಾರಿಗಳ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಇಂತಹ ನವವಸಾಹತುಶಾಹಿ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ ಎಂದಿದೆ.

ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಏಕಪಕ್ಷೀಯ ಹಾಗೂ ಬಲವಂತದ ಕ್ರಮ ಅಂತರರಾಷ್ಟ್ರೀಯ ಕಾನೂನಿನ ವಿರುದ್ಧವಾಗಿದ್ದು, ಹಡಗನ್ನು ವಶಪಡಿಸಿಕೊಂಡಿರುವ ಕ್ರಮವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಮಾನವೀಯ ನೆಲೆಯಲ್ಲಿ ತೈಲ ಟ್ಯಾಂಕರ್ ಹಡಗಿನ ಸಿಬ್ಬಂದಿಗೆ ಬೇಕಾದ ಎಲ್ಲ ನೆರವನ್ನು ನೀಡಬೇಕು. ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಬೇಕು. ಸಿಬ್ಬಂದಿ ಹಕ್ಕನ್ನು ಪಾಲಿಸಬೇಕು. ಅವರು ತಾಯ್ನಾಡಿಗೆ ಮರಳಲು ಯಾವುದೇ ಅಡೆತಡೆಯನ್ನುಂಟು ಮಾಡಬಾರದು ಎಂದು ಮನವಿ ಮಾಡಿದೆ.

ಡಿಸೆಂಬರ್ 24ರಂದು ಅಂತರರಾಷ್ಟ್ರೀಯ ನಿಯಮಕ್ಕೆ ಅನುಗುಣವಾಗಿ ತಾತ್ಕಾಲಿಕ ಪರವಾನಗಿ ಪಡೆದು ರಷ್ಯಾದ ಧ್ವಜ ಹೊಂದಿದ ಹಡಗು ಶಾಂತವಾಗಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ರಷ್ಯಾದತ್ತ ಸಾಗುತ್ತಿತ್ತು. ತೈಲ ಟ್ಯಾಂಕರ್ ವಿರುದ್ಧ ಅಮೆರಿಕದ ಮಿಲಿಟರಿ ಬಳಕೆಯ ಬಗ್ಗೆಯೂ ರಷ್ಯಾ ಕಳವಳ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.