
ನ್ಯೂಯಾರ್ಕ್: ಈ ತಿಂಗಳಾಂತ್ಯಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಜಿ20 ಶೃಂಗಸಭೆ ನಡೆಯುಲಿದ್ದು, ಅದರಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ಮಿಯಾಮಿಯಲ್ಲಿ ನಡೆದ ‘ಅಮೆರಿಕ ಬ್ಯುಸಿನೆಸ್ ಫೋರಂ’ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹಾಗೆ ನೋಡಿದರೆ ದಕ್ಷಿಣ ಆಫ್ರಿಕಾ ಜಿ20 ಗುಂಪಿನಲ್ಲಿಯೇ ಇರಬಾರದು. ಅಲ್ಲಿ ನಡೆಯುತ್ತಿರುವ ವಿದ್ಯಮಾನ ಕೆಟ್ಟದಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ‘ಕಮ್ಯುನಿಸ್ಟ್’ ಜೊಹ್ರಾನ್ ಮಮ್ದಾನಿ ಅವರನ್ನು ಇದೇ ವೇಳೆ ಟೀಕಿಸಿದ ಟ್ರಂಪ್, ‘ದಕ್ಷಿಣ ಆಫ್ರಿಕಾದಲ್ಲಿ ಕಮ್ಯುನಿಸ್ಟ್ ದಬ್ಬಾಳಿಕೆಯಿಂದ ಪಲಾಯನ ಮಾಡುವವರಿಗೆ ಮಿಯಾಮಿ ತಲೆಮಾರುಗಳಿಂದ ಆಶ್ರಯ ತಾಣವಾಗಿದೆ’ ಎಂದು ಹೇಳಿದ್ದಾರೆ.
2024ರ ಡಿಸೆಂಬರ್‌ನಲ್ಲಿ ಜಿ20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ನವೆಂಬರ್ 22ರಿಂದ 23ರವರೆಗೆ ಜೋಹಾನೆಸ್‌ಬರ್ಗ್‌ನಲ್ಲಿ ನಡೆಯಲಿರುವ ಸಭೆಯ ಆತಿಥ್ಯ ವಹಿಸಿಕೊಳ್ಳಲಿದೆ. ಈ ಮೂಲಕ ಜಿ20 ಶೃಂಗಸಭೆಯು ಮೊದಲ ಬಾರಿಗೆ ಆಫ್ರಿಕಾ ನೆಲದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.