ADVERTISEMENT

ಭಾರತ-ಪಾಕ್ ಸೇರಿದಂತೆ 8 ಯುದ್ಧ ನಿಲ್ಲಿಸಿಯೂ ನೊಬೆಲ್ ಸಿಕ್ಕಿಲ್ಲ: ಟ್ರಂಪ್

ಪಿಟಿಐ
Published 12 ಜನವರಿ 2026, 10:09 IST
Last Updated 12 ಜನವರಿ 2026, 10:09 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

(ಪಿಟಿಐ ಚಿತ್ರ)

ವಾಷಿಂಗ್ಟನ್: 'ಭಾರತ-ಪಾಕಿಸ್ತಾನ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಆದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ADVERTISEMENT

'ಆ ಎಲ್ಲ ಯುದ್ಧಗಳನ್ನು ಇತ್ಯರ್ಥಗೊಳಿಸುವುದು ಅತ್ಯಂತ ಕಷ್ಟಕರವಾಗಿತ್ತು. ಭಾರತ-ಪಾಕಿಸ್ತಾನ ಯುದ್ಧ ಮುಂದುವರಿಸುವ ಇರಾದೆಯಲ್ಲಿದ್ದವು. ಅತ್ಯಂತ ಕಠಿಣ ಎಂಟು ಸಂಘರ್ಷಗಳನ್ನು ನಿಲ್ಲಿಸಿದ್ದೇನೆ. ಈ ಪೈಕಿ ಕೆಲವು ಯುದ್ಧ 30 ವರ್ಷಕ್ಕೂ ಅಧಿಕ ಕಾಲ ನಡೆಯುತ್ತಿತ್ತು' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ 2009ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದನ್ನು ಟ್ರಂಪ್ ಟೀಕಿಸಿದ್ದಾರೆ.

'ಇದನ್ನು ನೆನಪಿಡಿ, ಬೇರೆ ಯಾರಿಂದಲೂ ಸಾಧ್ಯವಾಗದ್ದನ್ನು ನಾನು ಮಾಡಿದ್ದೇನೆ. ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದು ಬೇರೆ ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೂ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿಲ್ಲ. ಆದರೆ ಏನೂ ಮಾಡದೆಯೇ ಒಬಾಮ ಅವರಿಗೆ ಪ್ರಶಸ್ತಿ ದೊರಕಿತ್ತು. ಅದನ್ನೇಕೆ ಪಡೆದರು ಎಂದು ಸ್ವತಃ ಒಬಾಮ ಅವರಿಗೂ ಗೊತ್ತಿಲ್ಲ. ಆ ಪ್ರಶ್ನೆಗೆ ಉತ್ತರಿಸಲು ಅವರಿಂದ ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ಕಳೆದೊಂದು ವಾರದಲ್ಲಿ ಮೂರನೇ ಸಲ ಭಾರತ ಹಾಗೂ ಪಾಕಿಸ್ತಾನದ ನಡುವಣ ಯುದ್ಧ ಕೊನೆಗೊಳಿಸಿದ್ದೇನೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಒಟ್ಟಾರೆಯಾಗಿ ಸುಮಾರು 80 ಸಲ ಈ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.