
ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಸುಂಕದ ಸಮರ ಸಾರುವ ಬೆದರಿಕೆ ಒಡ್ಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಅಮೆರಿಕದ ಆರ್ಥಿಕತೆಯು ಸಾಗುತ್ತಿರುವ ಹಾದಿ ಕುರಿತು ಅಲ್ಲಿನ ನಾಗರಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಆಡಳಿತ ಕುರಿತು ರಾಯಿಟರ್ಸ್ ಸಮೀಕ್ಷೆ ನಡೆಸಿದ್ದು, ಪಾಲ್ಗೊಂಡವರು ದಾಖಲಿಸಿದ ಪ್ರತಿಕ್ರಿಯೆ ಆಧರಿಸಿ ವರದಿ ಪ್ರಕಟಿಸಲಾಗಿದೆ.
ಒಟ್ಟು ಆರು ದಿನಗಳ ಕಾಲ ಈ ಸಮೀಕ್ಷೆ ನಡೆಯಿತು. ಜ. 20 ಹಾಗೂ 21ರಂದು ನಡೆಸಿದ ಸಮೀಕ್ಷೆಯಲ್ಲಿ ಟ್ರಂಪ್ ಪರವಾಗಿ ಶೇ 47ರಷ್ಟು ಜನರಿದ್ದರು. ಜ. 24ರಿಂದ 26ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಇದು ಶೇ 45ಕ್ಕೆ ಕುಸಿದಿದೆ. ಇದೀಗ ಟ್ರಂಪ್ ವಿರುದ್ಧದ ಅಭಿಪ್ರಾಯ ಶೇ 51ಕ್ಕೆ ಏರಿಕೆಯಾಗಿದೆ.
ವಲಸೆ ನೀತಿ ಮತ್ತು ಅಕ್ರಮ ವಲಸಿಗರ ಗಡೀಪಾರು ಕ್ರಮದಿಂದ ಸಮೀಕ್ಷೆಯಲ್ಲಿ ಮತ್ತಷ್ಟು ಬದಲಾವಣೆಗಳಾಗಿವೆ. ಟ್ರಂಪ್ ಅವರ ಆಡಳಿತದಲ್ಲಿನ ಕೆಲ ಕ್ರಮಗಳಿಂದ ದೇಶದ ಆರ್ಥಿಕತೆ ತಪ್ಪು ಹಳಿಯ ಮೇಲೆ ಸಾಗುತ್ತಿದೆ ಎಂದೆನ್ನುವವರ ಸಂಖ್ಯೆ ಶೇ 53ಕ್ಕೆ ಏರಿಕೆಯಾಗಿದೆ. ಹಾಗೆಯೇ ಟ್ರಂಪ್ ಅವರು ನೀಡುತ್ತಿರುವ ಕೆಲ ಅನುಮೋದನೆಗಳಿಗೆ ಸಕಾರಾತ್ಮಕವಾಗಿರುವವರ ಸಂಖ್ಯೆ ಶೇ 43ರಿಂದ ಶೇ 39ಕ್ಕೆ ಕುಸಿದಿದೆ. 2017ರಲ್ಲಿ ಟ್ರಂಪ್ ಕುರಿತು ಶೇ 53ರಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.