ADVERTISEMENT

ಟರ್ಕಿಯಲ್ಲಿ 1,000ಕ್ಕೂ ಹೆಚ್ಚು ಪ್ರತಿಭಟನಕಾರರ ಬಂಧನ

ರಾಯಿಟರ್ಸ್
Published 24 ಮಾರ್ಚ್ 2025, 14:10 IST
Last Updated 24 ಮಾರ್ಚ್ 2025, 14:10 IST
ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಬಂಧನ ವಿರೋಧಿಸಿ ಟರ್ಕಿಯಲ್ಲಿ ಭಾನುವಾರ ರಾತ್ರಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು
ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಬಂಧನ ವಿರೋಧಿಸಿ ಟರ್ಕಿಯಲ್ಲಿ ಭಾನುವಾರ ರಾತ್ರಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು   

ಅಂಕಾರಾ: ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಅವರ ಬಂಧನ ವಿರೋಧಿಸಿ ಟರ್ಕಿಯಲ್ಲಿ ಕಳೆದ ಐದು ದಿನಗಳಿಂದ ನೂರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಈ ಪೈಕಿ 1,133 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದುವರೆಗಿನ ಪ್ರತಿಭಟನೆಗಳಲ್ಲಿ 123 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಭಯದ ವಾತಾವರಣ ಸೃಷ್ಟಿಯಾಗಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಅಲಿ ಯರ್ಲಕಾಯ ಅವರು ಸೋಮವಾರ ತಿಳಿಸಿದ್ದಾರೆ. 

’ರಿಪಬ್ಲಿಕನ್‌ ಪೀಪಲ್ಸ್‌ ಪಾರ್ಟಿ’ ನಾಯಕ ಇಮಾಮೊಗ್ಲು ಅವರನ್ನು ಕಳೆದ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕಳೆದೊಂದು ದಶಕದಲ್ಲಿ ಟರ್ಕಿಯಲ್ಲಿ ನಡೆದ ಬಹುದೊಡ್ಡ ಪ್ರತಿಭಟನೆ ಎನ್ನಲಾಗಿದೆ. 

ADVERTISEMENT

ಭಾನುವಾರ ಇಮಾಮೊಗ್ಲು ಅವರ ವಿರುದ್ಧ ದಾಖಲಾದ ಮತ್ತು ವಿಚಾರಣೆಗೆ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಅವರನ್ನು ನ್ಯಾಯಾಲಯವು ಕಾರಾಗೃಹಕ್ಕೆ ಕಳುಹಿಸಿದೆ. 

ಪೊಲೀಸರು ವಶಕ್ಕೆ ಪಡೆದವರ ಪೈಕಿ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ವರದಿ ಮಾಡುತ್ತಿದ್ದ 9 ಪತ್ರಕರ್ತರು ಇದ್ದಾರೆ ಎಂದು ಟರ್ಕಿಯ ಪತ್ರಕರ್ತರ ಸಂಘಟನೆಯೊಂದು ಆರೋಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.