ADVERTISEMENT

ರೋಗಿಗಳಿಗೆ ಎರಡು ವಿಭಿನ್ನ ಲಸಿಕೆಗಳು: ಬ್ರಿಟನ್‌ನಲ್ಲಿ ಪ್ರಯೋಗ

ಪ್ರತಿರೋಧಕ ಶಕ್ತಿ ಹೆಚ್ಚಿಸುವ ಕುರಿತು ವಿಶ್ಲೇಷನೆ: ವಿಶ್ವದಲ್ಲೇ ಮೊದಲ ಪ್ರಯತ್ನ

ಪಿಟಿಐ
Published 4 ಫೆಬ್ರುವರಿ 2021, 11:15 IST
Last Updated 4 ಫೆಬ್ರುವರಿ 2021, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ರೋಗಿಗಳಿಗೆ ಕೋವಿಡ್‌–19ನ ಎರಡು ವಿವಿಧ ಲಸಿಕೆಗಳನ್ನು ನೀಡುವ ವಿಶ್ವದ ಮೊದಲ ಕ್ಲಿನಿಕಲ್‌ ಪ್ರಯೋಗವನ್ನು ಬ್ರಿಟನ್‌ನಲ್ಲಿ ಆರಂಭಿಸಲಾಗಿದೆ.

ಮೊದಲ ಅಥವಾ ಎರಡನೇ ಡೋಸ್‌ನ ಸಂದರ್ಭದಲ್ಲಿ ವಿಭಿನ್ನ ಲಸಿಕೆಗಳನ್ನು ನೀಡುವುದು ಈ ಪ್ರಯೋಗದ ಉದ್ದೇಶ. ಉದಾಹರಣೆಗೆ, ಮೊದಲ ಡೋಸ್‌ ಅನ್ನು ಆಸ್ಟ್ರಾಜೆನೆಕಾ ಲಸಿಕೆ ನೀಡುವುದು. ನಂತರ ಎರಡನೇ ಡೋಸ್‌ ಫೈಜರ್‌ ಲಸಿಕೆ ನೀಡುವುದಾಗಿದೆ.

ಈ ಪ್ರಯೋಗಕ್ಕೆ ಸರ್ಕಾರ 70 ಲಕ್ಷ ಪೌಂಡ್‌ ಅನುದಾನ ಒದಗಿಸಿದೆ. ಬ್ರಿಟನ್‌ನ ಎಂಟು ರಾಷ್ಟ್ರೀಯ ಆರೋಗ್ಯ ಸಂಶೋಧನಾ ಸಂಸ್ಥೆಗಳಲ್ಲಿ ಈ ಕ್ಲಿನಿಕಲ್‌ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ. ಒಂದೇ ಲಸಿಕೆಗಿಂತ ವಿಭಿನ್ನ ಲಸಿಕೆಗಳು ಕೊರೊನಾ ವೈರಸ್‌ ವಿರುದ್ಧ ಪ್ರತಿರೋಧಕ ಶಕ್ತಿ ಸೃಷ್ಟಿಸುವ ಪರಿಣಾಮಗಳನ್ನು ಈ ಪ್ರಯೋಗಗಳ ಮೂಲಕ ವಿಶ್ಲೇಷಣೆ ನಡೆಸಲಾಗುತ್ತಿದೆ.

ADVERTISEMENT

‘ಇದೊಂದು ಮಹತ್ವದ ಕ್ಲಿನಿಕಲ್‌ ಪ್ರಯೋಗವಾಗಿದೆ. ಲಸಿಕೆಯ ಸುರಕ್ಷತೆಯ ಬಗ್ಗೆಯೂ ಮಹತ್ವದ ಮಾಹಿತಿ ಲಭ್ಯವಾಗುತ್ತದೆ’ ಎಂದು ಸಚಿವ ನಧಿಮ್‌ ಝಹಾವಿ ತಿಳಿಸಿದ್ದಾರೆ.

‘ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕ ಮತ್ತು ಸಂಶೋಧಕರು ಹಾಗೂ ತಜ್ಞರು ಸುರಕ್ಷಿತವಾಗಿದೆ ಎಂದು ಅನುಮೋದನೆ ನೀಡಿದ ಬಳಿಕವೇ ಈ ರೀತಿಯ ಲಸಿಕೆಗಳ ಪ್ರಯೋಗಕ್ಕೆ ಒಪ್ಪಿಗೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

13 ತಿಂಗಳ ಈ ಅಧ್ಯಯನದ ಸಂದರ್ಭದಲ್ಲಿ ವಿಭಿನ್ನ ಲಸಿಕೆಗಳು ಮತ್ತು ರೋಗಿಯ ಪ್ರತಿರೋಧಕ ಶಕ್ತಿಯ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು. ಪ್ರಾಥಮಿಕ ಹಂತದ ಫಲಿತಾಂಶವನ್ನು ಈ ವರ್ಷದ ಅಂತ್ಯಕ್ಕೆ ದೊರೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.