ADVERTISEMENT

ರಷ್ಯಾ ದಾಳಿ ಭೀತಿ: ಉಕ್ರೇನ್ ರಾಜಧಾನಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ನಿರ್ಬಂಧ

ಉಕ್ರೇನ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಬಂಧ

ರಾಯಿಟರ್ಸ್
Published 23 ಆಗಸ್ಟ್ 2022, 2:21 IST
Last Updated 23 ಆಗಸ್ಟ್ 2022, 2:21 IST
   

ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ.

ರಾಜಧಾನಿಯಲ್ಲಿ ಜನರು ಸೇರಿದರೆ, ರಷ್ಯಾ ದಾಳಿ ನಡೆಸುವ ಭೀತಿಯಿದ್ದು, ಹೀಗಾಗಿ ಯಾವುದೇ ರೀತಿಯ ಸಾರ್ವಜನಿಕ ಆಚರಣೆಗೆ ಸರ್ಕಾರ ಅವಕಾಶ ನೀಡಿಲ್ಲ.

ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಪ್ರತ್ಯೇಕಗೊಂಡ ಸಲುವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸಲಾಗುತ್ತದೆ.

ADVERTISEMENT

ಆದರೆ, ಈ ಬಾರಿ ಬುಧವಾರ ನಡೆಯಬೇಕಿದ್ದ 31ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ದಾಳಿ ಭೀತಿ ಇರುವುದರಿಂದ ಕೀವ್‌ನಲ್ಲಿ ಯಾವುದೇ ಬಹಿರಂಗ ಆಚರಣೆ ಇರುವುದಿಲ್ಲ.

ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದ್ದು, ಇನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಸೇನೆ ವಾಪಸಾತಿ ನಡೆದಿಲ್ಲ. ಉಕ್ರೇನ್‌ನ ಹಲವು ಪಟ್ಟಣಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜತೆಗೆ ನಿಗದಿತ ಅವಧಿಗೆ ಕರ್ಫ್ಯೂ ಸಡಿಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.