ADVERTISEMENT

ಸಾವಿರಕ್ಕೂ ಅಧಿಕ ಬಾರಿ ಉಕ್ರೇನ್ ಈಸ್ಟರ್ ಕದನ ವಿರಾಮ ಉಲ್ಲಂಘಿಸಿದೆ: ರಷ್ಯಾ ಆರೋಪ

ರಾಯಿಟರ್ಸ್
Published 20 ಏಪ್ರಿಲ್ 2025, 9:41 IST
Last Updated 20 ಏಪ್ರಿಲ್ 2025, 9:41 IST
<div class="paragraphs"><p>ಉಕ್ರೇನ್ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಯೊಂದರ ಚಿತ್ರ</p></div>

ಉಕ್ರೇನ್ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಯೊಂದರ ಚಿತ್ರ

   

ಚಿತ್ರ: ಉಕ್ರೇನ್‌ ತುರ್ತು ಸೇವೆ ಇಲಾಖೆ

ಮಾಸ್ಕೊ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದ ಈಸ್ಟರ್ ಕದನ ವಿರಾಮವನ್ನು ಉಕ್ರೇನ್ ಸಾವಿರಕ್ಕೂ ಅಧಿಕ ಬಾರಿ ಉಲ್ಲಂಘಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ADVERTISEMENT

ರಷ್ಯಾ ನೆಲೆಗಳ ಮೇಲೆ ಉಕ್ರೇನ್ 444 ಬಾರಿ ಗುಂಡಿನ ದಾಳಿ ನಡೆಸಿದೆ. 900ಕ್ಕೂ ಅಧಿಕ ಬಾರಿ ಡ್ರೋನ್ ದಾಳಿ ನಡೆಸಿದೆ ಎಂದು ಅದು ತಿಳಿಸಿದೆ.

ಆದರೆ ಯುದ್ಧ ಭೂಮಿಯ ವರದಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕದನ ವಿರಾಮ ಘೋಷಣೆಗೂ ಮುನ್ನ ರಷ್ಯಾದ ಸೇನಾ ಪಡೆಗಳು ಪೂರ್ವ ಉಕ್ರೇನ್‌ನ ನೊವೊಮಿಖೈಲಿವ್ಕಾ ನಗರದ ಮೇಲೆ ಆಧಿಪತ್ಯ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಇಲಾಖೆ ಹೇಳಿದ್ದಾಗಿ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.