ADVERTISEMENT

ಯುದ್ಧ ವೆಚ್ಛ ನೀಗಿಸಲು ಪೋರ್ನೊಗ್ರಫಿ ಕಾನೂನು ಬದ್ಧಗೊಳಿಸಲು ಮುಂದಾಯಿತೇ ಉಕ್ರೇನ್‌?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 11:37 IST
Last Updated 18 ಏಪ್ರಿಲ್ 2025, 11:37 IST
<div class="paragraphs"><p> ಅಶ್ಲೀಲ ವಿಡಿಯೊ ವೀಕ್ಷಣೆ</p></div>

ಅಶ್ಲೀಲ ವಿಡಿಯೊ ವೀಕ್ಷಣೆ

   

ಕೀವ್: ರಷ್ಯಾದೊಂದಿಗೆ ನಡೆದಿರುವ ಯುದ್ಧದಲ್ಲಿ ಮಾನವ ಹಾಗು ಆರ್ಥಿಕ ಸಂಪನ್ಮೂಲಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಉಕ್ರೇನ್‌, ಅಶ್ಲೀಲ ಚಿತ್ರಗಳ ಪೊರ್ನೊಗ್ರಫಿಯನ್ನು ಅಪರಾಧ ಪಟ್ಟಿಯಿಂದ ಕೈಬಿಟ್ಟು, ಕಾನೂನುಬದ್ಧಗೊಳಿಸಲು ಮುಂದಾಗಿದೆ ಎಂಬುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಸಂಸದ ಯರೊಸಲಾವ್‌ ಝೆಲೆಝಿಯಾಂಕ್ ಅವರು ಈ ಪ್ರಸ್ತಾವವನ್ನು ಅಲ್ಲಿನ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸದ್ಯ ಉಕ್ರೇನ್‌ನಲ್ಲಿ ಸೋವಿತ್‌ ಕಾಲದ ಕಾನೂನು ಇದ್ದು, ಅವು ಇಂದಿನ ನೈತಿಕ ಮತ್ತು ಆರ್ಥಿಕ ಪರಿಸ್ಥಿತಿಗೆ ಹೊಂದಿಕೆಯಾಗದು ಎಂದಿದ್ದಾರೆ.

ADVERTISEMENT

ಅಶ್ಲೀಲ ಚಿತ್ರಗಳ ತಯಾರಿಕಾ ಉದ್ಯಮವನ್ನು ಕಾನೂನುಬದ್ಧಗೊಳಿಸಿದರೆ ದೇಶಕ್ಕೆ ಹೆಚ್ಚಿನ ಆದಾಯ ತಂದುಕೊಡಲಿದೆ. ಅದು ಸದ್ಯ ನಡೆಯುತ್ತಿರುವ ಯುದ್ಧದ ವೆಚ್ಛದಿಂದ ಬಳಲಿರುವ ದೇಶಕ್ಕೆ ತುಸುಮಟ್ಟಿನ ನೆರವಾಗಲಿದೆ ಎಂದಿದ್ದಾರೆ.

ಈ ಮಸೂದೆಗೆ ಸಂಸದರಿಂದ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. ಅಧಿಕಾರಿಗಳು, ವಯಸ್ಕರ ಚಿತ್ರ ತಯಾರಕರು ಮತ್ತು ನಾಗಕರು ಮಸೂದೆಯ ನೈತಿಕತೆ, ಕಾನೂನು ಮತ್ತು ಯುದ್ಧ ಸಂದರ್ಭದಲ್ಲಿ ಇದರ ಅಗತ್ಯ ಕುರಿತು ಪ್ರಶ್ನಿಸಿದ್ದಾರೆ ಎಂದು ಫಸ್ಟ್‌ ಪೋಸ್ಟ್ ವರದಿ ಮಾಡಿದೆ.

ಉಕ್ರೇನ್ ಕಾನೂನು ಏನು ಹೇಳುತ್ತದೆ?

ಉಕ್ರೇನ್‌ನ 301ನೇ ವಿಧಿಯನ್ವಯ ಅಶ್ಲೀಲ ಚಿತ್ರಗಳ ನಿರ್ಮಾಣ, ವಿತರಣೆ ಮತ್ತು ಅದನ್ನು ಹೊಂದುವುದು ಅಕ್ರಮ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ 3ರಿಂದ 5 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಉಕ್ರೇನ್‌ ರಾಷ್ಟ್ರವು ಐರೋಪ್ಯ ರಾಷ್ಟ್ರಗಳು, ರಷ್ಯಾ ಮತ್ತು ಅಮೆರಿಕಕ್ಕಿಂತ ಅತಿ ಹೆಚ್ಚಿನ ಶಿಕ್ಷೆ ವಿಧಿಸುತ್ತಿದೆ. ಇಷ್ಟು ಮಾತ್ರವಲ್ಲ, ವಯಸ್ಕರ ನಡುವೆ ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದೂ ಇಲ್ಲಿ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.