ADVERTISEMENT

ಉಕ್ರೇನ್‌ಗೆ ಯುಇ ಸದಸ್ಯತ್ವ ನಿಶ್ಚಿತ: ಝೆಲೆನ್‌ಸ್ಕಿ ಸಂತಸ

ಏಜೆನ್ಸೀಸ್
Published 17 ಜೂನ್ 2022, 16:21 IST
Last Updated 17 ಜೂನ್ 2022, 16:21 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್‌: ರಷ್ಯಾ ಆಕ್ರಮಣ ಆರಂಭಿಸಿದ ನಾಲ್ಕು ತಿಂಗಳ ನಂತರ ಉಕ್ರೇನ್‌ಗೆ ಯುರೋಪ್‌ ಒಕ್ಕೂಟದ (ಯುಇ) ಸದಸ್ಯ ಪಡೆಯುವ ಉಮೇದುವಾರಿಕೆ ಸ್ಥಾನಮಾನವನ್ನು ಯುರೋಪಿಯನ್‌ ಕಮಿಷನ್‌ ಬೆಂಬಲಿಸಿರುವುದಕ್ಕೆ ಶ್ಲಾಘಿಸಿರುವಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಇದೊಂದು ಐತಿಹಾಸಿಕ ತೀರ್ಮಾನ’ ಎಂದು ಶುಕ್ರವಾರ ಬಣ್ಣಿಸಿದ್ದಾರೆ.

ಇದೇ 23 ಮತ್ತು 24ರಂದು ನಡೆಯುವ ಯುರೋಪ್‌ ಒಕ್ಕೂಟದ ನಾಯಕರ ಶೃಂಗಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ.ಉಕ್ರೇನ್‌ಗೆ ಔಪಚಾರಿಕ ಅಭ್ಯರ್ಥಿ ಸ್ಥಾನಮಾನವು ಒಕ್ಕೂಟ ಸೇರಲು ಬಾಗಿಲು ತೆರೆಯಲಿದೆ.

ರಷ್ಯಾ ಪ್ರಜೆಗಳಿಗೆ ನೀಡಲಾಗಿದ್ದ ವೀಸಾ ಮುಕ್ತ ಉಕ್ರೇನ್‌ ಪ್ರಯಾಣ ಸೌಲಭ್ಯವನ್ನು ಇದೇ ಜೂನ್‌ ಅಂತ್ಯಕ್ಕೆ ಕೊನೆಗೊಳಿಸಲಾಗುವುದು. ಜುಲೈ 1ರಿಂದಲೇ ಜಾರಿಗೆ ಬರುವಂತೆ ರಷ್ಯಾಕ್ಕೆ ವೀಸಾ ಕಡ್ಡಾಯಗೊಳಿಸಲಾಗುವುದು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.