ADVERTISEMENT

ರಷ್ಯಾ: 2 ತೈಲ ಸಂಸ್ಕರಣಾ ಘಟಕಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ

ರಾಯಿಟರ್ಸ್‌
Published 9 ಫೆಬ್ರುವರಿ 2024, 13:03 IST
Last Updated 9 ಫೆಬ್ರುವರಿ 2024, 13:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೀವ್‌: ರಷ್ಯಾದ ಕ್ರಾಸ್‌ನೋಡಾರ್‌ ಪ್ರಾಂತ್ಯದಲ್ಲಿರುವ ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್‌ ಶುಕ್ರವಾರ ಡ್ರೋನ್‌ ದಾಳಿ ನಡೆಸಿದೆ.

‘ಉಕ್ರೇನ್‌ನ ಭದ್ರತಾ ಸಂಸ್ಥೆ ಎಸ್‌ಬಿಯು ನಡೆಸಿದ ಈ ಕಾರ್ಯಾಚರಣೆಯಿಂದ ತೈಲ ಸಂಸ್ಕರಣಾ ಘಟಕಗಳು ಇರುವ ಸ್ಥಳದಲ್ಲಿ ಬೃಹತ್‌ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಇದಲ್ಲದೇ, ರಷ್ಯಾ ಬಳಿಯ ಅಫಿಪ್‌ಸ್ಕಿ ಬಳಿಯಿರುವ ತೈ ಸಂಸ್ಕರಣಾ ಘಟಕದ ಮೇಲೂ ಎಸ್‌ಬಿಯುನ ಡ್ರೋನ್‌ಗಳು ದಾಳಿ ನಡೆಸಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉಕ್ರೇನ್‌ ಮೂಲಗಳು ತಿಳಿಸಿವೆ.

ADVERTISEMENT

‘ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಎರಡು ತಾಸುಗಳಲ್ಲಿ ನಂದಿಸಲಾಗಿದೆ’ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಂಕಿ ಅವಘಡಕ್ಕೆ ಕಾರಣಗಳನ್ನು ಅವರು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.