ಕೀವ್: ಮಾತುಕತೆಗೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಶುಕ್ರವಾರ ಮನವಿ ಮಾಡಿದ್ದಾರೆ.
ಪುಟಿನ್ ಜತೆ ಮಾತುಕತೆಗೆ ತಾವು ಸಿದ್ಧವಿರುವುದಾಗಿ ಝೆಲೆನ್‌ಸ್ಕಿ ತಿಳಿಸಿದರು.
ಆದರೂ, ‘ಉಕ್ರೇನ್‌ಗೆ ಉಳಿದಿರುವುದು ನೀವು ಮಾತ್ರ’ ಎಂದು ಝೆಲೆನ್‌ಸ್ಕಿ ಭದ್ರತಾ ಪಡೆಗಳಿಗೆ ಸಂದೇಶ ನೀಡಿದ್ದಾರೆ.
ಇದೇ ವೇಳೆ ಅವರು, ಯೂರೋಪಿಯನ್ ಒಕ್ಕೂಟದ ದೇಶಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
‘ರಷ್ಯಾ ದಾಳಿಗೆ ಪ್ರತಿಯಾಗಿ ಯೂರೋಪ್ ದೇಶಗಳಿಂದ ಸೂಕ್ತ ಪ್ರತಿಕ್ರಿಯೆಯೇ ಇಲ್ಲವಾಗಿದೆ. ಇತ್ತ ರಷ್ಯಾದ ಯುದ್ಧ ಟ್ಯಾಂಕ್‌ಗಳು ಜನರನ್ನು ಕೊಲ್ಲುತ್ತಿವೆ. ಯೂರೋಪ್‌ಗೆ ಈಗಲೂ ಕಾಲ ಮಿಂಚಿಲ್ಲ. ರಷ್ಯಾದ ಆಕ್ರಮಣವನ್ನು ಎದುರಿಸಲು ಈಗಲೂ ಸಮಯ ಇದೆ. ಯುರೋಪ್‌ನ ನಾಗರಿಕರು ಪ್ರತಿಭಟನೆಗಳ ಮೂಲಕ ತಮ್ಮ ಸರ್ಕಾರ ರಷ್ಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಬೇಕು‘ ಎಂದು ಅವರು ಮನವಿ ಮಾಡಿದರು.
ರಷ್ಯಾದ ವರ್ತನೆಯು ವಿಶ್ವ ಯುದ್ಧವನ್ನು ಪುನರಾರಂಭಿಸಿದಂತೆ ಇದೆ ಎಂದೂ ಝೆಲೆನ್‌ಸ್ಕಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.