ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಹವಾಮಾನ ಆರ್ಥಿಕ ನೆರವು ಒದಗಿಸಬೇಕು ಎಂದು ಒತ್ತಾಯಿಸಿ ಅಜೈರ್‌ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ‘ಸಿಒಪಿ29’ ಶೃಂಗಸಭೆ ಆವರಣದಲ್ಲಿ ಪರಿಸರ ಹೋರಾಟಗಾರರು ಪ್ರತಿಭಟಿಸಿದರು
–ಎಎಫ್‌ಪಿ ಚಿತ್ರ
ಬಾಕು: ‘ಹವಾಮಾನ ಬದಲಾವಣೆ ತಡೆಗೆ ಕೈಗೊಂಡಿರುವ ನಿರ್ಧಾರಗಳು ‘ಜಿ–20 ರಾಷ್ಟ್ರಗಳ ಆರ್ಥಿಕತೆ ಸ್ವಯಂರಕ್ಷಣೆ’ ಕ್ರಮಗಳೇ ಆಗಿವೆ’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯಲ್ ಪ್ರತಿಪಾದಿಸಿದರು.
‘ಹವಾಮಾನ ಆಧರಿತ ಆರ್ಥಿಕ ಹಾನಿ ತಡೆಯಲು ಮಾಲಿನ್ಯಕ್ಕೆ ತ್ವರಿತ ನಿಯಂತ್ರಣ ಹೇರಬೇಕು’ ಎಂದು ಈ ವೇಳೆ ಜಿ–20 ರಾಷ್ಟ್ರಗಳ ಮುಖ್ಯಸ್ಥರಿಗೆ ಅವರು ಆಗ್ರಹಿಸಿದ್ದಾರೆ.
ತಾಪಮಾನ ಬದಲಾವಣೆ ಕುರಿತಂತೆ ಅಜೈರ್‌ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ನಡೆದ ‘ಸಿಒಪಿ29’ ಶೃಂಗಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
‘ಹವಾಮಾನ ಬದಲಾವಣೆ ತಡೆಗೆ ಜಿ–20 ರಾಷ್ಟ್ರಗಳೂ ಪರಿಹಾರ ಕಂಡುಕೊಳ್ಳಬೇಕು. ಒಂದು ರಾಷ್ಟ್ರ, ಕೆಲವೇ ರಾಷ್ಟ್ರಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ, ಮುಂದಿನ ವಾರ ರಿಯೊದಲ್ಲಿ ನಡೆಯುವ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಬದಲಾವಣೆ ವಿಷಯವೇ ಮೊದಲ ಆದ್ಯತೆಯಾಗಿರಬೇಕು’ ಎಂದು ಒತ್ತಿ ಹೇಳಿದರು.
ನವೆಂಬರ್ 18–19ರಂದು ಜಿ–20 ಸಮಾವೇಶವು ಬ್ರೆಜಿಲ್‌ನ ರಿಯೊ ಡ– ಜನೈರೊದಲ್ಲಿ ನಡೆಯಲಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ಹಲವು ಪ್ರಮುಖರು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.