ADVERTISEMENT

ರಷ್ಯಾ ವಿರುದ್ಧದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ 141 ಮತ: ಭಾರತ, ಚೀನಾ ನಿರ್ಲಪ್ತ

ಏಜೆನ್ಸೀಸ್
Published 3 ಮಾರ್ಚ್ 2022, 2:17 IST
Last Updated 3 ಮಾರ್ಚ್ 2022, 2:17 IST
ವಿಶ್ವಸಂಸ್ಥೆ ಸಾಮಾನ್ಯ ಸಭೆ
ವಿಶ್ವಸಂಸ್ಥೆ ಸಾಮಾನ್ಯ ಸಭೆ    

ವಿಶ್ವಸಂಸ್ಥೆ: ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಅಂಗೀಕರಿಸಲಾಗಿದೆ.

ಒಟ್ಟು 193 ದೇಶಗಳ ಪೈಕಿ 141 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ರಷ್ಯಾ, ಬೆಲರೂಸ್‌ಎರಿಟ್ರಿಯಾ, ಉತ್ತರ ಕೊರಿಯಾ, ಸಿರಿಯಾ... ಈ ಐದು ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿವೆ.

ಏಷ್ಯಾ ರಾಷ್ಟ್ರಗಳಾದ ಭಾರತ, ಚೀನಾ, ಪಾಕಿಸ್ತಾನ ಸಭೆಯಿಂದ ದೂರ ಉಳಿದು ನಿರ್ಲಿಪ್ತತೆ ಪ್ರದರ್ಶಿಸಿವೆ.

ADVERTISEMENT

ರಷ್ಯಾ ಈ ಕೂಡಲೇ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕು, ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು, ನಾಗರಿಕರನ್ನು ರಕ್ಷಿಸಬೇಕು ಎಂಬ ಅಂಶಗಳು ನಾಲ್ಕು ಪುಟಗಳ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

‘ಅವರು (ರಷ್ಯಾ) ಉಕ್ರೇನ್‌ನ ಅಸ್ತಿತ್ವದ ಹಕ್ಕನ್ನೇ ಕಸಿದುಕೊಳ್ಳಲು ಬಂದಿದ್ದಾರೆ’ ಎಂದು ಉಕ್ರೇನ್‌ನ ರಾಯಭಾರಿ ಸರ್ಗಿ ಕಿಸ್ಲಿಟ್ಯಾ ಮತದಾನದ ಮೊದಲು ಸಭೆಯಲ್ಲಿ ಹೇಳಿದರು.

‘ರಷ್ಯಾದ ಗುರಿ ಕೇವಲ ಆಕ್ರಮಣ ಮಾತ್ರವಲ್ಲ, ನರಮೇಧವೂ ಕೂಡ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.