ADVERTISEMENT

Covid-19 World Updates: ತಿಂಗಳ ಆರಂಭದಲ್ಲೇ 10 ಲಕ್ಷಕ್ಕೂ ಹೆಚ್ಚು ಪ್ರಕರಣ

ಏಜೆನ್ಸೀಸ್
Published 11 ನವೆಂಬರ್ 2020, 7:47 IST
Last Updated 11 ನವೆಂಬರ್ 2020, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ ತಿಂಗಳ ಆರಂಭದಲ್ಲೇ 10 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇಲಿನಾಯ್‌ನಲ್ಲಿ 12,000 ಮತ್ತು ವಿಸ್ಕಾನ್ಸಿನ್‌ನಲ್ಲಿ 7,000 ಹೊಸ ಪ್ರಕರಣಗಳು ಸೇರಿದಂತೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮಂಗಳವಾರ ಅತಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸೋಂಕಿನ ವಿರುದ್ಧ ಹೋರಾಡಲು ಏಕತೆ ಮತ್ತು ಸಹಕಾರವನ್ನು ನೀಡಬೇಕೆಂದು ಜನರಲ್ಲಿ ಕೋರಲು ಇಲ್ಲಿನ ಗವರ್ನರ್‌ ನಿರ್ಧರಿಸಿದ್ದಾರೆ.

ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಏರುತ್ತಿದೆ. ಇಂಡಿಯಾನದಲ್ಲಿ ಮಂಗಳವಾರ 63 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ADVERTISEMENT

ಇಡೀ ವಿಶ್ವದಾದ್ಯಂತ ಸೋಂಕಿತರ ಸಂಖ್ಯೆಯು ಏರಿಕೆಯಾಗಿದ್ದು, ಈವರೆಗೆ5,18,35,949 ಜನರಿಗೆ ಸೋಂಕು ತಗುಲಿದೆ. ಒಟ್ಟಾರೆ12,79,963 ಜನರು ಮೃತಪಟ್ಟಿದ್ದು,3,64,07,888 ಜನರು ಗುಣಮುಖರಾಗಿದ್ದಾರೆ. 1,41,48,098 ಸಕ್ರಿಯ ಪ್ರಕರಣಗಳಿವೆ.

ಇನ್ನುಳಿದಂತೆ ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ86,36,011 ಜನರಿಗೆ ಸೋಂಕು ತಗುಲಿದ್ದು,4,94,613 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,27,615 ಜನರು ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 57,01,283, ಫ್ರಾನ್ಸ್‌ನಲ್ಲಿ 18,29,659, ರಷ್ಯಾದಲ್ಲಿ 18,17,109 ಮತ್ತು ಸ್ಪೇನ್‌ನಲ್ಲಿ 14,43,997 ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.