ವಾಷಿಂಗ್ಟನ್:ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ವಿಚಾರದಲ್ಲಿ ಭಾರತದ ನಿಲುವು ಸಮಾಧಾನ ತಂದಿಲ್ಲ. ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಗಮನಿಸಿದರೆ ಅದರ ನಡೆ ಆಶ್ಚರ್ಯವನ್ನೂ ತರಿಸಿಲ್ಲ ಎಂದು ಅಮೆರಿಕಅಭಿಪ್ರಾಯಪಟ್ಟಿದೆ.
ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಮುಂದುವರೆಸಲು ಭಾರತಕ್ಕೆ ಪರ್ಯಾಯಗಳನ್ನು ಒದಗಿಸುವುದು ಅಗತ್ಯವಾಗಿತ್ತು ಎಂದುಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಇಂಡೋ-ಪೆಸಿಫಿಕ್‌ನ ನಿರ್ದೇಶಕಿ ಮೀರಾ ರಾಪ್-ಹೂಪರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.