ADVERTISEMENT

ಇರಾನ್ ಮೇಲೆ ದಾಳಿ ಸಾಧ್ಯತೆ: ಇಸ್ರೇಲ್ ತೊರೆಯುವಂತೆ ಅಮೆರಿಕ ರಾಯಭಾರಿಗಳಿಗೆ ಸೂಚನೆ

ಏಜೆನ್ಸೀಸ್
Published 27 ಫೆಬ್ರುವರಿ 2026, 16:03 IST
Last Updated 27 ಫೆಬ್ರುವರಿ 2026, 16:03 IST
   

ಟೆಲ್‌ ಅವೀವ್‌: ಇರಾನ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ, ಇಸ್ರೇಲ್‌ ತೊರೆಯಲು ಬಯಸುವ ತನ್ನ ರಾಯಭಾರಿ ಕಚೇರಿ ಸಿಬ್ಬಂದಿ ತಕ್ಷಣವೇ ಅಲ್ಲಿಂದ ಹೊರಡುವಂತೆ ಅಮೆರಿಕ ಶುಕ್ರವಾರ ನಿರ್ದೇಶನ ನೀಡಿದೆ.

‘ಇಸ್ರೇಲ್ ಅನ್ನು ತೊರೆಯುವ ಅವಕಾಶವನ್ನು ಅಮೆರಿಕ ರಾಯಭಾರಿಗಳಿಗೆ ನೀಡಲು ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಇಸ್ರೇಲ್‌ನಲ್ಲಿನ ಅಮೆರಿಕ ರಾಯಭಾರಿ ಮೈಕ್‌ ಹಕಬೀ ಹೇಳಿದ್ದಾರೆ.

‘ತಕ್ಷಣ ಹೊರಟು ಬಿಡಿ. ಇಸ್ರೇಲ್ ಹೊರಡುವ ವಿಮಾನದ ಮೂಲಕ ಶೀಘ್ರವೇ ಬಂದು ಬಿಡಿ. ಮುಂದಿನ ದಿನಗಳಲ್ಲಿ ವಿಮಾನ ಸೌಲಭ್ಯ ಸಿಗದಿರಬಹುದು’ ಎಂದು ತಿಳಿಸಲಾಗಿದೆ.

ADVERTISEMENT

ಇರಾನ್‌ ಮತ್ತು ಅಮೆರಿಕ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.