ಇಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ‘ಉದ್ಯಮಿ ಇಲಾನ್ ಮಸ್ಕ್ ಅವರು ಹೊಸ ಪಕ್ಷ ಘೋಷಣೆ ಮಾಡಿರುವುದು ‘ಹಾಸ್ಯಾಸ್ಪದ’ವಾಗಿದ್ದು, ಅವರು ಸಂಪೂರ್ಣವಾಗಿ ದಾರಿ ತಪ್ಪಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.
ಒಂದು ಕಾಲದಲ್ಲಿ ಟ್ರಂಪ್ ಜೊತೆಗೆ ಗುರುತಿಸಿಕೊಂಡಿದ್ದ ಮಸ್ಕ್ ಅವರು, ಈಗ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಕ್ಕೆ ಪರ್ಯಾಯವಾಗಿ ‘ಅಮೆರಿಕನ್ ಪಕ್ಷ’ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
‘ನನ್ನ ಅನಿಸಿಕೆ ಮೂರನೇ ಪಕ್ಷ ಸ್ಥಾಪಿಸುತ್ತಿರುವುದು ಹಾಸ್ಪಾಸ್ಪದವಾಗಿದೆ. ದೇಶದಲ್ಲಿ ಎರಡು ಪಕ್ಷಗಳ ವ್ಯವಸ್ಥೆಯಷ್ಟೇ ಉಳಿಯಲಿದೆ. ಮೂರನೇ ಪಕ್ಷವು ಸ್ಥಾಪನೆಯಾದರೆ, ಜನರಿಗೆ ಗೊಂದಲ ಉಂಟುಮಾಡಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ‘ಟ್ರೂಥ್’ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿರುವ ಟ್ರಂಪ್,‘ಇಲಾನ್ ಮಸ್ಕ್ ಅವರು ಸಂಪೂರ್ಣ ದಾರಿ ತಪ್ಪಿರುವುದನ್ನು ನೋಡಲು ಬೇಸರವಾಗುತ್ತಿದೆ. ಒಂದೊಮ್ಮೆ ಮೂರನೇ ಪಕ್ಷವನ್ನು ಮಸ್ಕ್ ಸ್ಥಾಪಿಸಿದರೂ ಕೂಡ ಅವರು ಯಶಸ್ವಿಯಾಗುವುದಿಲ್ಲ. ಹೊಸ ಪಕ್ಷವು ಜನರಲ್ಲಿ ಸಂಪೂರ್ಣವಾಗಿ ಗೊಂದಲ ಸೃಷ್ಟಿಸಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.