ADVERTISEMENT

ಉಕ್ರೇನ್ ಮೇಲೆ ದಾಳಿಯಾದರೆ ಸೂಕ್ತ ಕ್ರಮ: ಪುಟಿನ್‌ಗೆ ಬೈಡೆನ್ ಎಚ್ಚರಿಕೆ

ಏಜೆನ್ಸೀಸ್
Published 13 ಫೆಬ್ರುವರಿ 2022, 2:41 IST
Last Updated 13 ಫೆಬ್ರುವರಿ 2022, 2:41 IST
ಅಮೆರಿಕ ಅಧ್ಯಕ್ಷ ಜೋ ಬೈಡೆನ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್   

ಉಕ್ರೇನ್ ಮೇಲೆ ದಾಳಿ ನಡೆದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಉಭಯ ನಾಯಕರು ಫೋನ್ ಮೂಲಕ ಶನಿವಾರ ಮಾತುಕತೆ ನಡೆಸಿದ್ದಾರೆ.

ರಾಜತಾಂತ್ರಿಕ ಕ್ರಮಗಳ ಮೂಲಕ ಸಮಸ್ಯೆಯನ್ನು ಸರಿಪಡಿಸಲು ಅಮೆರಿಕ ಬಯಸುತ್ತದೆ. ಆದರೆ ಅದು ಸಾಧ್ಯವಿಲ್ಲ ಎಂದಾದರೆ, ಸೂಕ್ತ ರೀತಿಯಲ್ಲಿ ಉತ್ತರ ಕೊಡಲು ಕೂಡ ಸಿದ್ಧರಿದ್ದೇವೆ ಎಂದು ಶ್ವೇತಭವನ ಹೇಳಿದೆ.

ADVERTISEMENT

ಈಗಾಗಲೇ ಹಲವು ಬಾರಿ ಉಕ್ರೇನ್ ಬಿಕ್ಕಟ್ಟು ಸಲುವಾಗಿ ರಷ್ಯಾ ಜತೆ ಅಮೆರಿಕ ಮಾತುಕತೆ ನಡೆಸಿದೆ.

ಅಲ್ಲದೆ, ರಷ್ಯಾ ಪಡೆಗಳು ಉಕ್ರೇನ್‌ನಲ್ಲಿ ಬೀಡುಬಿಟ್ಟಿದ್ದು, ಯುದ್ಧದ ವಾತಾವರಣ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.