ಮದ್ಯ (ಪ್ರಾತಿನಿಧಿಕ ಚಿತ್ರ), ಡೊನಾಲ್ಡ್ ಟ್ರಂಪ್
(ಐಸ್ಟೋಕ್, ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಯುರೋಪಿಯನ್ ಮದ್ಯಕ್ಕೆ ಅಧಿಕ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ವಿಸ್ಕಿ ಮೇಲೆ ಶೇ 50ರ ತೆರಿಗೆಯನ್ನು ರದ್ದು ಮಾಡದಿದ್ದರೆ ಯುರೋಪಿನಿಂದ ಬರುವ ಎಲ್ಲ ವೈನ್ ಹಾಗೂ ಇತರೆ ಆಲ್ಕೋಹಾಲ್ ಉತ್ಪನ್ನಗಳ ಮೇಲೆ ಶೇ 200ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಟ್ರುತ್'ನಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, 'ವಿಶ್ವದ ಅತ್ಯಂತ ಪ್ರತಿಕೂಲ ಹಾಗೂ ನಿಂದನೀಯ ಸುಂಕ ವಿಧಿಸುವ ಆಡಳಿತಗಳಲ್ಲಿ ಐರೋಪ್ಯ ಒಕ್ಕೂಟ (ಇಯು) ಒಂದಾಗಿದೆ. ಅಮೆರಿಕದಿಂದ ಲಾಭ ಪಡೆಯುವುದೇ ಇದರ ಏಕೈಕ ಉದ್ದೇಶವಾಗಿದೆ' ಎಂದು ಆರೋಪಿಸಿದ್ದಾರೆ.
'ಅಮೆರಿಕದ ವಿಸ್ಕಿಯ ಮೇಲೆ ಶೇ 50ರಷ್ಟು ಸುಂಕ ವಿಧಿಸಿದೆ. ಈ ಸುಂಕವನ್ನು ತಕ್ಷಣವೇ ತೆರವುಗೊಳಿಸದಿದ್ದರೆ, ಫ್ರಾನ್ಸ್ ಮತ್ತು ಇತರೆ ಐರೋಪ್ಯ ಒಕ್ಕೂಟವು ಪ್ರತಿನಿಧಿಸುವ ದೇಶಗಳಿಂದ ಬರುವ ಎಲ್ಲ ವೈನ್, ಶಾಂಪೇನ್ ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲೆ ಶೀಘ್ರದಲ್ಲೇ ಅಮೆರಿಕ ಶೇ 200ರಷ್ಟು ಸುಂಕ ವಿಧಿಸಲಿದೆ' ಎಂದು ಎಚ್ಚರಿಸಿದ್ದಾರೆ.
'ಇದರಿಂದ ಅಮೆರಿಕದ ವೈನ್ ಮತ್ತು ಶಾಂಪೇನ್ ವಹಿವಾಟಿಗೆ ಉತ್ತೇಜನ ಸಿಗಲಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.