ADVERTISEMENT

ಸಿರಿಯಾದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದ ಅಮೆರಿಕ

ಏಜೆನ್ಸೀಸ್
Published 19 ಸೆಪ್ಟೆಂಬರ್ 2020, 6:05 IST
Last Updated 19 ಸೆಪ್ಟೆಂಬರ್ 2020, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌(ಅಮೆರಿಕ): ಅಮೆರಿಕವು ಪೂರ್ವ ಸಿರಿಯಾದಲ್ಲಿ ಹೆಚ್ಚುವರಿ ಸೇನೆ ಮತ್ತು ಶಸ್ತ್ರ ಸಜ್ಜಿತ ವಾಹನಗಳನ್ನು ನಿಯೋಜಿಸಿದೆ.

ಕಳೆದ ಹಲವು ದಿನಗಳಿಂದ ಪೂರ್ವ ಸಿರಿಯಾದಲ್ಲಿ ಅಮೆರಿಕ ಮತ್ತು ರಷ್ಯಾ ಪಡೆಗಳ ನಡುವೆ ಘರ್ಷಣೆಗಳು ಹೆಚ್ಚಿದೆ. ಅಲ್ಲದೇ ಇತ್ತೀಚೆಗೆ ನಡೆದ ವಾಹನ ಅಪಘಾತದಲ್ಲಿ ಅಮೆರಿಕದ ನಾಲ್ವರು ಯೋಧರಿಗೆ ಗಾಯಗಳಾಗಿದ್ದವು. ಇದರ ಬೆನ್ನಲ್ಲೇ ಅಮೆರಿಕವು ಪೂರ್ವ ಸಿರಿಯಾದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ.

‘ಈ ಪ್ರದೇಶದಲ್ಲಿ ರೇಡಾರ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಯುದ್ಧ ವಿಮಾನಗಳ ಗಸ್ತು ಕೂಡ ಹೆಚ್ಚಿಸಲಾಗಿದೆ. ಅಮೆರಿಕ ಮತ್ತು ಮೈತ್ರಿ ಸೇನೆಯ ರಕ್ಷಣೆಯೇ ಇದರ ಉದ್ದೇಶ. ಅಮೆರಿಕವು ಸಿರಿಯಾದಲ್ಲಿ ಬೇರೆ ಯಾವುದೇ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ. ಆದರೆ ಅವಶ್ಯಕತೆ ಇದ್ದಲ್ಲಿ ಮೈತ್ರಿ ಸೇನೆಯನ್ನು ರಕ್ಷಿಸಲು ಸಿದ್ಧವಾಗಿದೆ’ ಎಂದು ಅಮೆರಿಕದ ಕೇಂದ್ರ ಕಮಾಂಡರ್‌ನ ವಕ್ತಾರ ನೇವಿ ಕ್ಯಾಪ್ಟನ್‌ ಬಿಲ್‌ ಅರ್ಬನ್‌ ಅವರು ತಿಳಿಸಿದರು.

ADVERTISEMENT

‘ಅಮೆರಿಕವು ಪೂರ್ವ ಸಿರಿಯಾದಲ್ಲಿ ಅರಕ್ಕೂ ಹೆಚ್ಚುಬ್ರಾಡ್ಲಿ ಯುದ್ಧ ವಾಹನಗಳು, ಸುಮಾರು 100 ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಇದು ಅಮೆರಿಕ ಮತ್ತು ಮೈತ್ರಿ ರಾಷ್ಟ್ರದ ಮೇಲೆ ದಾಳಿ ನಡೆಸದಂತೆ ರಷ್ಯಾಕ್ಕೆ ಎಚ್ಚರಿಕೆಯಾಗಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.