ADVERTISEMENT

ಕೊರೊನಾ ಚೆಲ್ಲಾಟ...

ಕೆ.ವಿ.ರಾಜಲಕ್ಷ್ಮಿ
Published 14 ಅಕ್ಟೋಬರ್ 2020, 19:31 IST
Last Updated 14 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಮಕ್ಕಳಿಗೆ ಶಾಲೆ ತೆಗೀದಿದ್ದರೇನಂತೆ? ಮನೆಯಲ್ಲಿ ಸುಧಾರಿಸೋಕ್ಕಾಗೋಲ್ಲ ಅನ್ನೋ ವಾದ ಬಿಡಬೇಕು. ಈ ವರ್ಷ ಇಲ್ಲದಿದ್ರೆ ಮುಂದಿನ ವರ್ಷವೇ ಆಗ್ಲಿ ಬಿಡು. ಟೆಸ್ಟು , ಅಂಕಗಳ ಟಾರ್ಗೆಟ್ ಇಟ್ಟು ಮಗೂ ಜೀವ ತಿನ್ನೋದು ಬಿಡಬೇಕು’ ಫೋನಲ್ಲಿ ಅತ್ತೆಯಉಪದೇಶ.

‘ಪುಟ್ಟಿ ಶಾಲೆಯ ಕ್ಯಾಟಗರಿ ಅಲ್ಲ, ಟಾರ್ಗೆಟ್ ಯಾರೋ?’

‘ಸರೋಜಾ ಆಂಟಿಯ ಮಗಳಿಗೆ ಕ್ಲಾಸ್ ತಗೋತಿದ್ದಾರೆ. ಅವರ ಪಾಪು ಫಸ್ಟ್ ಸ್ಟ್ಯಾಂಡರ್ಡ್, ಪಾಪ... ಒಂದು ರಾಶಿ ಪಾಠ ಮೊಬೈಲ್‌ಗೆ ಬಂದು ಬೀಳುತ್ತೆ, ಟೆಸ್ಟ್ ಬೇರೆ... ಪಾಪುಗಿಂತ ಅದರಅಮ್ಮನಿಗೇ ಹೆದರಿಕೆ... ಬೀದಿ ನೋಡಿ ತಿಂಗಳುಗಳಾಯ್ತು ಅಂತ, ವರ್ಕ್ ಫ್ರಮ್ ಹೋಮ್‌ನಲ್ಲಿರೋಮಗಳ ಗೋಳಾಟ’ ನನ್ನವಳು ರಿಪೋರ್ಟ್ ಕೊಟ್ಟಳು.‌

ADVERTISEMENT

‘ಇನ್ನೇನು ಮತ್ತೆ...? ಟೆಸ್ಟ್ ಮಾಡದೇನೆ ಪಾಸಿಟಿವ್, ನೆಗೆಟಿವ್ ಇದ್ದರೂ ಪಾಸಿಟಿವ್ ಅನ್ನುವ ಪರಿಸ್ಥಿತಿಯಲ್ಲಿ ಹೊರಗೆ ತಲೆ ಹಾಕೋಕ್ಕೆ ಭಯ. ಗ್ರಹಚಾರ ತಪ್ಪಿ ಮಾಸ್ಕ್ ಮರೆತರೆ ಅಥವಾ ಮೂಗಿನಿಂದ ಜಾರಿದರೆ ಜೇಬಿಗೆ ಕತ್ತರಿ. ಕೊರೊನಾ ಚೆಲ್ಲಾಟ- ಶ್ರೀಸಾಮಾನ್ಯನಿಗೆ ಪ್ರಾಣಸಂಕಟ...’ ನಾನು ವರದಿ ಕೊಟ್ಟೆ.

ಅಷ್ಟರಲ್ಲಿ ಮೂಗಿನಿಂದ ಕೆಳಗೆಇಳಿದಿದ್ದ ಮಾಸ್ಕ್‌ನೊಂದಿಗೆ ಕಂಠಿ ಬಂದ. ಅವನ ಸಪ್ಪೆ ಮೋರೆ ನೋಡಿ ‘ಏನಾದರೂ ಎಡವಟ್ಟು ಮಾಡಿಕೊಂಡ್ಯಾ?’ ಕಳವಳ ತೋರಿದೆ.

‘ರಸ್ತೇಲಿ ನನ್ನ ಪಾಡಿಗೆ ನಾನು ಬರ್ತಿದ್ದೆ. ಆದರೂ ಹಿಡಿದ್ರು, ಫೈನ್ ಕಟ್ಟು ಅಂದ್ರು’.

‘ಪ್ರೊಟೆಸ್ಟ್ ಮಾಡಲಿಲ್ವಾ’ ಪುಟ್ಟಿಯ ಪ್ರಶ್ನೆ.

‘ಮಾಸ್ಕ್ ಇರೋದುಮೂಗು ಮುಚ್ಚಿಕೊಳ್ಳೋಕೆ ಅಂತ ಬಾಯಿಗೆಜಾರಿದ್ದ ಮಾಸ್ಕ್ ತೋರಿಸಿದರು’.

‘ಅದೂ ಸರಿಯೇ ಅಲ್ವೇ? ಮಾಸ್ಕ್‌ನ ಗಲ್ಲಕ್ಕೋ ಹಣೆಗೋ ಎಳ್ಕೊಂಡ್ರೆ ಪ್ರಯೋಜನ ವೇನು? ಅದನ್ನ ಹಾಕ್ಕೊಂಡು ಫ್ಯಾಷನ್ ಮಾಡೋದಲ್ಲ... ಫೈನ್ ಹಾಕೋದು ಫೈನ್ ಆಗಿರಿ ಅಂತ’ ಅತ್ತೆಯ ಚಾಲಾಕಿಗುಟುರು.

‘ಮೊದಲುಲೂಸ್ ಆಗಿರೋ ಮಾಸ್ಕ್ ಬಿಸಾಡಿ, ಹೊಸದು ಕೊಡ್ತೀನಿ’ ನನ್ನವಳು ಕನಿಕರಿಸಿದಳು. ಕಂಠಿ ಸ್ವಲ್ಪ ಗೆಲುವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.