
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಲೇಕ್‌ಸಕ್ಸಸ್, ಜ. 11– ದೂರಪ್ರಾಚ್ಯದ ಸಮಸ್ಯಾ ಪರಿಹಾರಾರ್ಥವಾಗಿ ಬ್ರಿಟನ್, ಅಮೆರಿಕ, ರಷ್ಯಾ ಮತ್ತು ಕೆಂಪುಚೀಣ ರಾಷ್ಟ್ರಗಳು ಸಭೆ ಸೇರಿ ಮಾತುಕತೆ ನಡೆಸಬೇಕೆಂದು ಲಂಡನ್ನಿನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಪ್ರಧಾನಿಗಳ ಸಮ್ಮೇಳನವು ಮಾಡಿರುವ ನೂತನ ಸಲಹೆಗೆ ಅಮೆರಿಕವು ಅನುಕೂಲಪ್ರದ ರೀತಿಯಲ್ಲಿ ಉತ್ತರವಿತ್ತಿದೆಯೆಂದು ಪಿಟಿಐ ಪ್ರತಿನಿಧಿ ವರದಿ ಮಾಡಿದ್ದಾರೆ.
ಕಾಮನ್‌ವೆಲ್ತ್ ಪ್ರಧಾನಿಗಳಿಂದ ಸೂಚಿಸಲ್ಪಟ್ಟ ಈ ನೂತನ ಯೋಜನೆಯು ವಿಶ್ವಸಂಸ್ಥೆಯ ರಾಜಕೀಯ ಸಮಿತಿಯಲ್ಲಿ ಇಂದು ಪರಿಶೀಲಿಸಲ್ಪಡುವ ಸಂಭವವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.