
ಪ್ರಜಾವಾಣಿ ವಾರ್ತೆನವದೆಹಲಿ, ಫೆ. 27– ಪಾಕಿಸ್ತಾನ ಸರಕಾರ ಸಾರಿರುವ ಪಾಕಿಸ್ತಾನ್ ರೂಪಾಯಿಯ ಸಮಮೌಲ್ಯವನ್ನು ಅಧರಿಸಿ ಭಾರತ–ಪಾಕಿಸ್ತಾನದ ಮಧ್ಯೆ ವಿನಿಮಯ ವ್ಯವಹಾರ ನಡೆಸಲು ಭಾರತ ಸರ್ಕಾರ ಒಪ್ಪಿದೆ ಎಂಬುದಾಗಿ ಅರ್ಥ ಸಚಿವ ಸಿ.ಡಿ. ದೇಶಮುಖ್ ಅವರು ಈ ಸಂಜೆ ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.
ಈ ಒಪ್ಪಂದದ ರೀತ್ಯ 1951ರಲ್ಲಿ ಭಾರತ 2 ಲಕ್ಷ ಟನ್ ಆಹಾರ ಧಾನ್ಯ ಗಳನ್ನು (ಬಹುಪಾಲು ಅಕ್ಕಿ ಸ್ವಲ್ಪ ಭಾಗ ಗೋಧಿ) ಪಡೆಯುವ ಸಂಭವವಿದೆ. ಬೆಳೆ ಚೆನ್ನಾಗಿದ್ದರೆ ಬರುವ ವರ್ಷ 1 ಲಕ್ಷ ಟನ್ ಅಕ್ಕಿ, 2 ಲಕ್ಷ ಟನ್ ಗೋಧಿ ಒದಗಿಸಲು ಪಾಕಿಸ್ತಾನ ಸಮ್ಮತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.