ADVERTISEMENT

25 ವರ್ಷಗಳ ಹಿಂದೆ | ಮೋಸದಾಟ: ಅಜರುದ್ದೀನ್, ಲಾರಾ, ಸ್ಟುವರ್ಟ್‌ ಹೆಸರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
   

ನವದೆಹಲಿ, ಅ. 31– ಭಾರತ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್‌, ವೆಸ್ಟ್‌ ಇಂಡೀಸ್‌ನ ಬ್ರಿಯಾನ್‌ ಲಾರಾ, ಇಂಗ್ಲೆಂಡ್‌ನ ಅಲೆಕ್‌ ಸ್ಟುವರ್ಟ್‌ ಹಾಗೂ ಆಸ್ಟ್ರೇಲಿಯಾದ ಡೀನ್‌ ಜೋನ್ಸ್‌ ಮೋಸದಾಟದಲ್ಲಿ ಭಾಗಿಯಾಗಿದ್ದರು ಎಂಬ ಬುಕ್ಕಿಗಳ ಹೇಳಿಕೆಗಳು ಸಿಬಿಐ ಸಲ್ಲಿಸಿದ ವರದಿಯಲ್ಲಿ ಇವೆ
ಎಂದು ಕೇಂದ್ರ ಕ್ರೀಡಾ ಸಚಿವ ಸುಖದೇವ್‌ ಸಿಂಗ್ ಧಿಂಡ್ಸಾ ಅವರು ತಿಳಿಸಿದ್ದಾರೆ.

ಲಾರಾ, ಸ್ಟುವರ್ಟ್, ಜೋನ್ಸ್‌ ಅವರೊಂದಿಗೆ ಪಾಕಿಸ್ತಾನದ ಸಲೀಮ್‌ ಮಲಿಕ್‌, ಆಸ್ಟ್ರೇಲಿಯಾದ ಮಾರ್ಕ್‌ ವಾ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಅವರ ಹೆಸರುಗಳು ಸಿಬಿಐ ವರದಿಯಲ್ಲಿ ಇವೆ. ಇದರೊಂದಿಗೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ ಹಾಗೂ ಇಂಗ್ಲೆಂಡ್‌ನ ಇನ್ನೂ ಮೂವರು ಆಟಗಾರರ
ಹೆಸರು ವರದಿಯಲ್ಲಿ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT