
ಪ್ರಜಾವಾಣಿ ವಾರ್ತೆನವದೆಹಲಿ, ಡಿ.6– ‘ಇಂದಿನ ವಿಶ್ವದ ವಿಷಮ ಪರಿಸ್ಥಿತಿಗೆ ಶಾಂತಿಯುತವಾದ ಪರಿಹಾರ ಕಂಡುಹಿಡಿಯಲು ಸರ್ವಪ್ರಯತ್ನ ಮಾಡಿ’ ಎಂಬುವುದಾಗಿ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಇಂದು ಅಮೆರಿಕ, ಬ್ರಿಟನ್, ಸೋವಿಯತ್ ರಷ್ಯಾ ಮತ್ತು ಚೀಣಾಗಳಲ್ಲಿ ಹೃತ್ಪೂರ್ವಕ ಮನವಿ ಮಾಡಿದರು.
ವಿಶ್ವಪರಿಸ್ಥಿತಿ ಕುರಿತ ಚರ್ಚೆಯನ್ನು ಪಾರ್ಲಿಮೆಂಟಿನಲ್ಲಿ ಆರಂಭ ಮಾಡಿದ ನೆಹರೂ ಅವರು, ‘ದುಷ್ಟತನದ ಸಾಕ್ಷಾತ್ಕಾರದಂತಿರುವ ಅಣು ಬಾಂಬನ್ನು ಈಗಾಗಲಿ, ಮುಂದಾಗಲಿ ಉಪಯೋಗಿಸುವ ಪ್ರಶ್ನೆಯೇ ಏಳದು’ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.