ADVERTISEMENT

ಅಕ್ರಮ ಎಸಗುವವರಿಗೂ ಬೇಕು ರೇಡಿಯೊ ಕಾಲರ್‌!

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ಮಾನವ– ಪ್ರಾಣಿ ಸಂಘರ್ಷ ತಪ್ಪಿಸಲು 9 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ‌ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ (ಪ್ರ.ವಾ., ಮಾರ್ಚ್‌ 13). ಆನೆಗಳು ನಾಡಿನ ಬಳಿ ಬರುತ್ತಿದ್ದಂತೆಯೇ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆಈ ಕಾಲರ್‌ಗಳು ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತವೆ. ಆದರೆ ಆನೆಗಳಿಗೆ ಕಾಲರ್ ತೊಡಿಸುವಂತೆಯೇ ಕಾಡಿನಲ್ಲಿ ಮರಗಳನ್ನು ಕಡಿಯುವ, ಗಣಿಗಾರಿಕೆ, ಮರಳು ಮಾಫಿಯಾ, ಕಳ್ಳಬೇಟೆ, ಒತ್ತುವರಿ ಮುಂತಾದ ಅಕ್ರಮಗಳನ್ನು ಎಸಗುತ್ತಿರುವವರಿಗೂ ಇಂತಹ ಕಾಲರ್‌ ತೊಡಿಸುವಂತಿದ್ದರೆ ಒಳ್ಳೆಯದಿತ್ತು.

ಕಾಡಿನ ಜೀವಿಯೊಂದು ನಾಡಿಗೆ ಬಂದರೆ ಮಾಹಿತಿ ನೀಡುವ ತಂತ್ರಜ್ಞಾನ ವಿದೆ. ಆದರೆ ನಾಡಿನ ಜೀವಿಯಾದ ಮಾನವ ಎಗ್ಗಿಲ್ಲದೇ ಅರಣ್ಯ ಸಂಪತ್ತನ್ನು ಲೂಟಿ ಮಾಡಿದರೆ ಯಾವ ಕಾಲರ್ ಕೂಡ ಮಾಹಿತಿ ನೀಡುವುದಿಲ್ಲ. ಈಗ ನಿಜಕ್ಕೂ ಅನಿಸುವುದೆಂದರೆ, ಇಲ್ಲಿ ಕಾಲರ್ ತೊಡಿಸಿಕೊಳ್ಳುವಂತಹ ಅಪರಾಧ ಮಾಡಿರುವುದು ವನ್ಯಜೀವಿಗಳಲ್ಲ, ಬದಲಿಗೆ ಮಾನವ.

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.