ADVERTISEMENT

ವಾಚಕರವಾಣಿ | ವಕೀಲರು-ಪೊಲೀಸರ ಸಂಘರ್ಷ ಆಘಾತಕಾರಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 2:17 IST
Last Updated 6 ನವೆಂಬರ್ 2019, 2:17 IST
   

ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಶನಿವಾರ ನಡೆದ ಸಂಘರ್ಷವು ನಾಗರಿಕ ಸಮಾಜ ತಲೆತಗ್ಗಿಸುವಂತಿತ್ತು.

ಆ ದಿನ ಅಲ್ಲಿನ ವಕೀಲರ ವರ್ತನೆಯನ್ನು ನೋಡಿದವರಿಗೆ ಅವರಲ್ಲಿ ಮಾನವೀಯ ಗುಣಗಳೇ ಇಲ್ಲವೇನೋ ಎನಿಸುವಂತಿತ್ತು. ಕಾರಣ ಏನೇ ಇರಲಿ, ಕರ್ತವ್ಯನಿರತ ಪೊಲೀಸರ ಮೇಲೆ ವಕೀಲರ ಗುಂಪೊಂದು ಏಕಾಏಕಿ ಮೃಗೀಯ ರೀತಿಯಲ್ಲಿ ದಾಳಿ ನಡೆಸಿತು. ಪೊಲೀಸರ ಮೇಲಿನ ಈ ಹಲ್ಲೆ ಖಂಡನೀಯ.

ವಕೀಲರು ಸಂಘಟಿತರಾಗಿ ಇಂಥ ಕೃತ್ಯಗಳನ್ನು ಎಸಗುವ ಪರಿಪಾಟ ಹೆಚ್ಚುತ್ತಿರುವುದು ಆತಂಕಕಾರಿ. ತಾವು ಏನೇ ಮಾಡಿದರೂ ಕಾನೂನಿನ ದಂಡದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಆಕ್ರಮಣಕಾರಿ ಮನೋಭಾವ ಇಂತಹ ದುಷ್ಕೃತ್ಯಕ್ಕೆ ಕಾರಣ.

ADVERTISEMENT

ಮಾಧ್ಯಮಗಳು ಏಕೋ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಾನವ ಹಕ್ಕುಗಳ ಆಯೋಗವಾದರೂ ಈ ಬಗ್ಗೆ ಸ್ವಯಂಪ್ರೇರಿತ ವರದಿ ನೀಡುವ ಮೂಲಕ, ಸಂಘಟನೆಯಿಲ್ಲದ ಪೊಲೀಸರಿಗೆ ಮಾನಸಿಕ ಸ್ಥೈರ್ಯ ತುಂಬಲಿ.

-ತಿಮ್ಮೇಶ ಮುಸ್ಟೂರು, ಜಗಳೂರು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.