
ವಿಶ್ವದಾದ್ಯಂತ 2025ನೇ ವರ್ಷಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ಇನ್ನೂ ಕೆಲವು ದೇಶಗಳಲ್ಲಿ ಭಾರತಕ್ಕಿಂತ ಹಲವು ಗಂಟೆಗಳ ಮೊದಲು ಹೊಸ ವರ್ಷವನ್ನು ಸ್ವಾಗತಿಸಿರುತ್ತಾರೆ.
ಸಾಮಾನ್ಯವಾಗಿ ಸಮಯವನ್ನು ಅಕ್ಷಾಂಶ ಮತ್ತು ರೇಖಾಂಶದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದರಿಂದಾಗಿ ಭೂಪ್ರದೇಶಕ್ಕೆ ಅನುಗುಣವಾಗಿ ಕಾಲಮಾನದಲ್ಲಿ ಏರುಪೇರಾಗುತ್ತದೆ. ಇದು ಸಮಯದ ಅಂತರವನ್ನು ಹೆಚ್ಚಿಸುತ್ತದೆ.
ಈ ಕಾರಣದಿಂದಾಗಿ ಕೆಲವು ದೇಶಗಳಲ್ಲಿ ಹೊಸ ವರ್ಷವನ್ನು ಭಾರತೀಯ ಕಾಲಮಾನಕ್ಕಿಂತ ಮೊದಲೇ ಆಚರಣೆ ಮಾಡಲಾಗುತ್ತದೆ. ಅಂದರೆ ಭಾರತದಲ್ಲಿ ರಾತ್ರಿ 12ಗಂಟೆಯ ನಂತರ ಹೊಸ ವರ್ಷಾಚರಣೆ ಆರಂಭವಾಗುತ್ತದೆ. ಆದರೆ ಅದಕ್ಕೂ ಮುನ್ನವೇ ಕೆಲ ದೇಶಗಳು ಹೊಸವರ್ಷವನ್ನು ಬರಮಾಡಿಕೊಂಡಿರುತ್ತವೆ.
ಹೊಸ ವರ್ಷವನ್ನು ಮೊದಲು ಸ್ವಾಗತಿಸುವ, ವಿಶ್ವದ ಮೊದಲ ದೇಶ ಕಿರಿಬಾಟಿ, ಇದೊಂದು ಪೆಸಿಫಿಕ್ ದ್ವೀಪ ರಾಷ್ಟ್ರವಾಗಿದೆ. ಈ ದ್ವೀಪ ರಾಷ್ಟದ ಜನರು ವಿಶ್ವದಲ್ಲಿಯೇ ಎಲ್ಲರಿಗಿಂತ ಮೊದಲು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಈ ಪುಟ್ಟ ದ್ವೀಪ ರಾಷ್ಟದಲ್ಲಿ 1.20 ಲಕ್ಷ ಜನಸಂಖ್ಯೆ ಇದೆ.
ಕಿರಿಬಾಟಿಯಲ್ಲಿ ಹೊಸವರ್ಷವು ಭಾರತದ ಕಾಲಮಾನಕ್ಕಿಂತ ಸುಮಾರು 8:5 ಗಂಟೆಗಿಂತ ಮೊದಲು ಆರಂಭವಾಗುತ್ತದೆ. ಇದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.
ಕಿರಿಬಾಟಿ ಹೊರತುಪಡಿಸಿ ಇತರೆ ಕೆಲವು ದೇಶಗಳು ಕೂಡ ಹೊಸ ವರ್ಷವನ್ನು ಭಾರತಕ್ಕಿಂತ ಗಂಟೆಗಳಿಗೂ ಮೊದಲು ಸ್ವಾಗತಿಸಿರುತ್ತಾರೆ. ಅವುಗಳೆಂದರೆ,
ಭಾರತೀಯ ಕಾಲಮಾನದ ಪ್ರಕಾರ ಯಾವ ದೇಶದಲ್ಲಿ ಎಷ್ಟು ಗಂಟೆಗೆ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ
ಸಮೋವಾ: ಡಿಸೆಂಬರ್ 31ರ ರಾತ್ರಿ 11:00 ಗಂಟೆಗೆ
ಟೊಂಗಾ: ಡಿಸೆಂಬರ್ 31ರ ರಾತ್ರಿ 11:00 ಗಂಟೆಗೆ
ಟೊಕೆಲಾವ್: ಡಿಸೆಂಬರ್ 31ರ ರಾತ್ರಿ 11:00 ಗಂಟೆಗೆ
ನ್ಯೂಜಿಲೆಂಡ್: ಡಿಸೆಂಬರ್ 31ರ ರಾತ್ರಿ 10:45
ರಷ್ಯಾ: ಡಿಸೆಂಬರ್ 31ರ ರಾತ್ರಿ 10:00 ಗಂಟೆಗೆ
ಫಿಜಿ: ಡಿಸೆಂಬರ್ 31ರ ರಾತ್ರಿ 10:00 ಗಂಟೆಗೆ
ಮಾರ್ಷಲ್ ದ್ವೀಪಗಳು: ಡಿಸೆಂಬರ್ 31ರ ರಾತ್ರಿ 10:00 ಗಂಟೆಗೆ
ನೌರು: ಡಿಸೆಂಬರ್ 31ರ ರಾತ್ರಿ 10:00 ಗಂಟೆಗೆ
ವಾಲಿಸ್ ಮತ್ತು ಫ್ಯುಚುನಾ: ಡಿಸೆಂಬರ್ 31ರ ರಾತ್ರಿ 10:00 ಗಂಟೆಗೆ
ಟುವಾಲು: ಡಿಸೆಂಬರ್ 31, ರಾತ್ರಿ 10:00 ಗಂಟೆಗೆ
ಆಸ್ಟ್ರೇಲಿಯಾ: ಡಿಸೆಂಬರ್ 31ರ ರಾತ್ರಿ 9:30 ಕ್ಕೆ ಹೊಸವರ್ಷ ಆಚರಣೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.