ADVERTISEMENT

ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ ನೋಡಿ, ಪಕ್ಕಾ ಸಿಹಿ ಇರುತ್ತೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2026, 7:16 IST
Last Updated 17 ಫೆಬ್ರುವರಿ 2026, 7:16 IST
<div class="paragraphs"><p>ಕಲ್ಲಂಗಡಿ</p></div>

ಕಲ್ಲಂಗಡಿ

   

ಗೆಟ್ಟಿ ಚಿತ್ರ

ಬೇಸಿಗೆ ಆರಂಭವಾಗುತ್ತಿದೆ. ಋತುಮಾನದ ಹಣ್ಣುಗಳಾದ ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ದ್ರವಾಂಶ ಹೆಚ್ಚು ಇರುವ ಹಣ್ಣುಗಳ ಸೇವನೆ ಅಗತ್ಯವಾಗಿರುತ್ತದೆ. ನಿರ್ಜಲೀಕರಣದಿಂದ ಪಾರಾಗಲು ಸಹ ಇಂತಹ ಹಣ್ಣುಗಳು ಬೇಕು.

ADVERTISEMENT

ಅಂತಹ ಹಣ್ಣುಗಳಲ್ಲಿ ಥಟ್‌ ಎಂದು ನೆನಪಿಗೆ ಬರುವುದು ಕಲ್ಲಂಗಡಿ. ಯಥೇಚ್ಚ ನೀರಿನಾಂಶವಿರುವ ಕಲ್ಲಂಗಡಿ ಹಣ್ಣುಗಳು ದೇಹವನ್ನೂ ತಂಪಾಗಿರಿಸಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಾಗಿಯೇ ಇದು ಬೇಸಿಗೆ ಸ್ನೇಹಿಯಾಗಿದೆ.

ಮಾರುಕಟ್ಟೆಯಲ್ಲಿ ತರಹೇವಾರಿ ಕಲ್ಲಂಗಡಿ ಹಣ್ಣುಗಳು ಸಿಗುತ್ತವೆ. ತಿಳಿ ಹಸಿರು, ಢಾಳ ಹಸಿರು, ಸ್ವಲ್ಪ ಹಳದಿಯಾಗಿರುವುದು, ಬುಡದ ಒಂದು ‍ಪಾರ್ಶ್ವದಲ್ಲಿ ಬಿಳಿಯಾಗಿರುವುದು ಹೀಗೆ ವಿವಿಧ ರೂಪಗಳಿವೆ. ಕೆಲವೊಮ್ಮೆ ಎಷ್ಟು ಆಯ್ಕೆ ಮಾಡಿ ತಂದರೂ ಅಯ್ಯೋ ಕಲ್ಲಂಗಡಿ ಸಿಹಿಯೇ ಇಲ್ಲ, ನೀರಿನಾಂಶ ಕಡಿಮೆ ಇದೆ ಎಂದು ಅಲವತ್ತುಕೊಳ್ಳುತ್ತೇವೆ. ಆದರೆ ನಿಮಗೆ ಗೊತ್ತಾ ಕಲ್ಲಂಗಡಿ ಆಯ್ಕೆಯಲ್ಲಿ ತುಸು ಜಾಣತನ ತೋರಿದರೆ ಒಳ್ಳೆಯ ಹಣ್ಣನ್ನೇ ಮನೆಗೆ ತರಬಹುದು. ಅದು ಹೇಗೆ ಎನ್ನುವ ಸಿಂಪಲ್‌ ಟಿಪ್ಸ್ ಇಲ್ಲಿದೆ.

ಕಲ್ಲಂಗಡಿ ಆಯ್ಕೆ

ಹಸಿರು ಕಲ್ಲಂಗಡಿಯ ಮೇಲೆ ಢಾಳ ಹಸಿರಿನ ಲಂಭವಾದ ಪಟ್ಟಿಗಳಿರುವುದನ್ನು ಎಲ್ಲರೂ ನೋಡಿರುತ್ತೇವೆ. ಈ ಪಟ್ಟಿಗಳ ನಡುವಿನ ಅಂತರ ಕಿರಿದಾಗಿದ್ದು, ಹಣ್ಣು ವೃತ್ತಾಕಾರವಾಗಿದ್ದರೆ ಸಿಹಿ ಹೆಚ್ಚು ಎನ್ನುತ್ತಾರೆ ಹಣ್ಣಿನ ತಜ್ಞರು ಹಾಗೂ ಅನುಭವಿಗಳು.

ಕಲ್ಲಂಗಡಿ ಹಣ್ಣು ದುಂಡು ಬದಲು ತುಸು ಉದ್ದವಾಗಿದ್ದು, ಹಸಿರು ಪಟ್ಟಿಗಳ ನಡುವಿನ ಅಂತರ ಕಿರಿದಾಗಿದ್ದರೆ ಅಂತಹ ಕಲ್ಲಂಗಡಿ ಹಣ್ಣುಗಳಲ್ಲಿ ನೀರಿನಾಂಶ ಹೆಚ್ಚು ಇರುತ್ತದೆ. 

ಕಲ್ಲಂಗಡಿ ಹಣ್ಣುಗಳು ಬುಡದ ಪಾರ್ಶ್ವ ಭಾಗದಲ್ಲಿ ತುಸು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅಂತಹ ಹಣ್ಣುಗಳೂ ತುಂಬಾ ಸಿಹಿಯಾಗಿ ರುಚಿಕರವಾಗಿರುತ್ತವೆ. 

ಇನ್ನು ಬುಡದ ಒಂದು ಪಾರ್ಶ್ವದಲ್ಲಿ ಸ್ವಲ್ಪ ಬಿಳಿಯಾಗಿದ್ದರೆ ಅಂತಹ ಕಲ್ಲಂಗಡಿ ಹಣ್ಣುಗಳು ರುಚಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಎಳೆಯ ಕಲ್ಲಂಗಡಿಯಾಗಿದ್ದರೂ ಬುಡದಲ್ಲಿ ಬಿಳಿಬಣ್ಣ ಇರುತ್ತದೆ.

ಹಸಿರು ಪಟ್ಟಿಗಳು ತೀರಾ ಹತ್ತಿರದಲ್ಲಿ ಇದ್ದರೆ ಹಂತಹ ಕಲ್ಲಂಗಡಿಗಳು ಸಿಹಿಯಾಗಿರುತ್ತವೆ. ಹಸಿರು ಪಟ್ಟಿಗಳ ಅಂತರ ಹೆಚ್ಚಿದ್ದರೆ ಹಣ್ಣು ರುಚಿಕರವಾಗಿಲ್ಲ ಎನ್ನುವುದನ್ನು ಅರಿತುಕೊಳ್ಳಬಹುದು.

ಬಣ್ಣವನ್ನು ಪರೀಕ್ಷಿಸಿ. ಮಾಗಿದ ಕಲ್ಲಂಗಡಿ ಹಣ್ಣು ಕಡು ಹಸಿರು ಬಣ್ಣದಲ್ಲಿರುತ್ತದೆ. ಕಲ್ಲಂಗಡಿ ಹೊರಭಾಗದಲ್ಲಿ ಹೊಳೆಯುತ್ತಿದ್ದರೆ ಅವು ಒಳಗಡೆ ಸರಿಯಾಗಿ ಹಣ್ಣಾಗಿಲ್ಲ ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.