
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಹೊಸ ವರ್ಷ 2026ರ ಮೊದಲ ದಿನವಾದ ಗುರುವಾರ (ಜ. 1)ದಿಂದ ಆರಂಭವಾಗುತ್ತಿದೆ. ಈ ವರ್ಷ 365 ದಿನಗಳಿದ್ದು, ಇದೇ ರೀತಿ ಗುರುವಾರವೇ ಆರಂಭವಾದ ಹಿಂದಿನ ಅನೇಕ ವರ್ಷಗಳು ವಿಭಿನ್ನ ಘಟನಾವಳಿಗಳಿಂದ ಇಂದಿಗೂ ಇತಿಹಾಸಪುಟ ತಿರುವಿಹಾಕಿದರೆ ಆ ವರ್ಷಗಳನ್ನು ನೆನಪಿಸುತ್ತದೆ.
ವರ್ಷ 2026, ಗುರುವಾರ (ಜ. 1) ದಿಂದ ಆರಂಭವಾಗಿ ಗುರುವಾರ (ಡಿ. 31)ವೇ ಅಂತ್ಯವಾಗುತ್ತಿರುವ ವರ್ಷ. ಇದೇ ರೀತಿ 2015, 2009, 1998, 1987, 1981, 1970, 1959, 1953, 1942, 1931 ಹಾಗೂ ಹಿಂದೆ ಇನ್ನೂ ಕೆಲ ವರ್ಷಗಳ ಒಂದೇ ರೀತಿಯ ಆರಂಭ ಹಾಗೂ ಅಂತ್ಯವಾಗುವವರೆಗೂ ದಿನಾಂಕ ಹಾಗೂ ದಿನ ಒಂದೇ ಆಗಿವೆ.
1942ರಲ್ಲಿ 2ನೇ ವಿಶ್ವ ಯುದ್ಧ ನಡೆದಿತ್ತು. ಆ ವರ್ಷದ ಕ್ಯಾಲೆಂಡರ್ ಕೂಡಾ 2026 ಅನ್ನೇ ಹೋಲುತ್ತದೆ. ಆ ವರ್ಷ ಫೆ. 15ರಂದು ಸಿಂಗಪೂರ್ ಅನ್ನು ಜಪಾನ್ ವಶಕ್ಕೆ ಪಡೆದಿತ್ತು. ಜೂನ್ 4ರಂದು ಅಮೆರಿಕದ ಪಡೆಗೆ ಜಯ ಸಿಕ್ಕಿತ್ತು.
2026ರ ಕ್ಯಾಲೆಂಡರ್ ಅನ್ನೇ ಹೋಲುವ 1953ರಲ್ಲಿ ಭಾರತದ ತೇನ್‌ಸಿಂಗ್ ನಾರ್ವೆ ಮತ್ತು ನ್ಯೂಜಿಲೆಂಡ್‌ನ ಎಡ್ಮಂಡ್ ಹಿಲೇರಿ ಅವರು ಮೇ 29ರಂದು ಮೌಂಟ್ ಎವರೆಸ್ಟ್ ಏರಿ ಇತಿಹಾಸ ನಿರ್ಮಿಸಿದರು. ಇದೇ ವರ್ಷ ಸ್ಟಾಲಿನ್ ನಿಧನರಾದರು. 1959ರಲ್ಲಿ ಚಂದ್ರನ ಅಂಗಳದಲ್ಲಿ ಲೂನಾ–1 ಇಳಿದಿತ್ತು.
1998ರಲ್ಲಿ ಭಾರತ ಪೋಕ್ರಾನ್–2 ಅಣ್ವಸ್ತ್ರ ಪರೀಕ್ಷೆಯನ್ನು (ಆಪರೇಷನ್ ಶಕ್ತಿ) ನಡೆಸಿ ವಿಶ್ವಕ್ಕೆ ದಿಟ್ಟ ಉತ್ತರ ನೀಡಿತ್ತು. ಇದೇ ವರ್ಷ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಹೀಗೆ ಇತಿಹಾಸದಲ್ಲಿ ಗುರುವಾರದಿಂದ ಆರಂಭವಾಗಿ ಗುರುವಾರವೇ ಕೊನೆಯಾಗುವ ವರ್ಷದಲ್ಲಿ ಹಲವು ಪ್ರಮುಖ ಘಟನಾವಳಿಗಳು ನಡೆದಿವೆ. ಈ ವರ್ಷವೂ ಸಾಕಷ್ಟು ಬೆಳವಣಿಗೆಯ ನಿರೀಕ್ಷೆ ಇದೆ.
ಸಂಖ್ಯಾಶಾಸ್ತ್ರದ ಪ್ರಕಾರ 2026 ವರ್ಷವನ್ನು ‘ಯೂನಿವರ್ಸಲ್ ಇಯರ್ 1’ ಎಂದೇ ಜಾಗತಿಕ ಮಟ್ಟದಲ್ಲಿ ಕರೆಯಲಾಗುತ್ತಿದೆ. ಏಕೆಂದರೆ (2+0+2+6=1) ಈ ವರ್ಷ ನಾಯಕತ್ವ, ಮುಂದಾಳತ್ವ ಮತ್ತು ಹೊಸ ಹಾದಿಯತ್ತ ಜಗತ್ತು ಸಾಗಲಿದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಹೊಸ ನಿರೀಕ್ಷೆಗಳು ಗರಿಗೆದರಿವೆ.
ವೈಯಕ್ತಿಕವಾಗಿಯೂ ದಿಟ್ಟ ಹೆಜ್ಜೆಗಳನ್ನಿಡುವ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ, ಹೊಸ ಜವಾಬ್ದಾರಿ ಲಭಿಸುವ ಮತ್ತು ಅಂತರಂಗದಲ್ಲೂ ಸ್ಪಷ್ಟತೆ ಹೊಂದುವ ವರ್ಷ ಎಂದೇ ಜ್ಯೋತಿಷಿಗಳು ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಈಡೇರದ ಕನಸುಗಳಿಗೆ 2026ರಲ್ಲಿ ಉತ್ತರ ಸಿಗಲಿದೆ. ಹೊಸ ಭರವಸೆಗೆ ಹೊಸ ವರ್ಷ ಸಾಕ್ಷಿಯಾಗಲಿದೆ ಎಂದೇ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.