ADVERTISEMENT

ಐತಿಹಾಸಿಕ ಟೆಸ್ಟ್‌: ಅಫ್ಗನ್ ತಂಡಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಶಿಖರ್‌ ಧವನ್‌ ಶತಕ ಸಂಭ್ರಮ

ಏಜೆನ್ಸೀಸ್
Published 14 ಜೂನ್ 2018, 11:14 IST
Last Updated 14 ಜೂನ್ 2018, 11:14 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿರುವ ಭಾರತ– ಅಫ್ಗಾನಿಸ್ತಾನ ವಿರುದ್ಧ ಐತಿಹಾಸಿಕ ಟೆಸ್ಟ್‌ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ತಂಡಗಳಿಗೆ ಶುಭಕೋರಿದ್ದಾರೆ.

‘ಮೊದಲ ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯ ಆಡುತ್ತಿರುವ ಅಫ್ಗಾನಿಸ್ತಾನ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಟೆಸ್ಟ್‌ ಪಂದ್ಯವನ್ನು ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತೋಷವಾಗಿದೆ. ಉಭಯ ತಂಡಗಳಿಗೆ ಅಭಿನಂದನೆಗಳು. ಎರಡು ತಂಡಗಳ ನಡುವಿನ ಕ್ರಿಕೆಟ್‌ ಸಂಬಂಧ ಉತ್ತಮವಾಗಿರಲಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್‌ ಸಿಂಗ್‌ ರಾಥೋಡ್‌​ ಟ್ವೀಟ್‌ ಮಾಡಿದ್ದು, ‘ಭಾರತದ ವಿರುದ್ಧ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡುತ್ತಿರುವ ಅಫ್ಘಾನಿಸ್ತಾನ ತಂಡಕ್ಕೆ ಶುಭವಾಗಲಿ. ಕ್ರಿಕೆಟ್‌ನಿಂದ ಭಾರತ ಹಾಗೂ ಅಫ್ಗಾನ್‌​ ನಡುವೆ ಉತ್ತಮ ಸಂಬಂಧದ ಹೊಸ ಇನ್ನಿಂಗ್ಸ್​ಪ್ರಾರಂಭವಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಈ ಪಂದ್ಯದ ಮೂಲಕ ಅಫ್ಗಾನಿಸ್ತಾನ ತಂಡ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ.

ಅಫ್ಗಾನ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 190 ರನ್‌ ಗಳಿಸಿದೆ(ಶಿಖರ್‌ ಧವನ್‌ 107, ಮುರಳಿ ವಿಜಯ್‌ 69*, ಕೆ.ಎಲ್‌.ರಾಹುಲ್‌ 2*).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.