ADVERTISEMENT

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ: ಯಾರೂ ಮಾಡದ ಸಾಧನೆ ಮಾಡಿದ ಅಭಿಷೇಕ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2025, 10:29 IST
Last Updated 31 ಡಿಸೆಂಬರ್ 2025, 10:29 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

(ಚಿತ್ರ ಕೃಪೆ: ಐಸಿಸಿ)

ಭಾರತ ಟಿ20 ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು 2025ರಲ್ಲಿ ಅತ್ಯಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ದಾಖಲೆ ಬರೆದಿದ್ದಾರೆ.

ADVERTISEMENT

ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟರ್ ಎಂಬ ದಾಖಲೆಯನ್ನು ತ‌ಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್ ಅವರ ಹೆಸರಿನಲ್ಲಿತ್ತು.

ಇನ್ನೂ ವಿಶೇಷವೆಂದರೆ, ಇದುವರೆಗೂ ಯಾವುದೇ ಬ್ಯಾಟರ್ ಕೂಡ ವರ್ಷವೊಂದರಲ್ಲಿ 200ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿಲ್ಲ. 2024ರಲ್ಲಿ ವಿಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ 185.34 ಸ್ಟ್ರೈಕ್ ರೇಟ್​ನಲ್ಲಿ 1074 ರನ್ ಕಲೆಹಾಕಿದ್ದರು.

2025ರಲ್ಲಿ ಅಭಿಷೇಕ್ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ 202.01ರ ಸ್ಟ್ಟೈಕ್‌ರೇಟ್‌ನ‌ಲ್ಲಿ ಬರೋಬ್ಬರಿ 1602 ರನ್ ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್ ಒಂದೇ ವರ್ಷ 200ಕ್ಕಿಂತ ಅಧಿಕ ಸ್ಟ್ರೈಕ್ ರೇಟ್​ನಲ್ಲಿ 1500ಕ್ಕೂ ಅಧಿಕ ರನ್ ರನ್​ ಕಲೆಹಾಕಿಲ್ಲ.

ಮಾತ್ರವಲ್ಲ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 190ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್​ನಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದೇ ವರ್ಷ ಅಭಿಷೇಕ್ ಶರ್ಮಾ ಅವರು ಭಾರತ ಪರ 193.46ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 859 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.