ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿ
(ಚಿತ್ರ ಕೃಪೆ: )
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಹೊಸ ಋತುವಿಗೆ ವೇದಿಕೆ ಸಜ್ಜುಗೊಂಡಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದೊಂದಿಗೆ ಈಗಾಗಲೇ 2025-27ನೇ ಸಾಲಿನ ಡಬ್ಲ್ಯುಟಿಸಿ ಆವೃತ್ತಿಗೆ ಚಾಲನೆ ದೊರಕಿದೆ.
ಅತ್ತ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಸರಣಿಯಲ್ಲಿ ಭಾಗವಹಿಸುತ್ತಿವೆ. ಇತ್ತಂಡಗಳಿಗೂ ಹೊಸ ಋತುವಿನ ಮೊದಲ ಟೆಸ್ಟ್ ಸರಣಿ ಇದಾಗಿದೆ.
ಇಂಗ್ಲೆಂಡ್ ಪ್ರವಾಸ ಬೆಳೆಸಿರುವ ಭಾರತ ಐದು ಪಂದ್ಯಗಳ 'ಆ್ಯಂಡರ್ಸನ್-ತೆಂಡೂಲ್ಕರ್' ಟ್ರೋಫಿಯಲ್ಲಿ ಭಾಗವಹಿಸಲಿದೆ.
ಭಾರತ vs ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿ ಇಲ್ಲಿದೆ:
ಮೊದಲ ಟೆಸ್ಟ್: ಜೂನ್ 20ರಿಂದ ಜೂನ್ 24ರವರೆಗೆ, ಹೆಡಿಂಗ್ಲಿ, ಲೀಡ್ಸ್
ಎರಡನೇ ಟೆಸ್ಟ್: ಜುಲೈ 2ರಿಂದ ಜುಲೈ 6ರವರೆಗೆ, ಎಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್
ಮೂರನೇ ಟೆಸ್ಟ್: ಜುಲೈ 10ರಿಂದ ಜುಲೈ 14ರವರೆಗೆ, ಲಾರ್ಡ್ಸ್, ಲಂಡನ್
ನಾಲ್ಕನೇ ಟೆಸ್ಟ್: ಜುಲೈ 23ರಿಂದ ಜುಲೈ 27ರವೆರೆಗೆ, ಓಲ್ಡ್ ಟ್ರಾಫರ್ಡ್, ಮ್ಯಾಚೆಂಸ್ಟರ್
ಅಂತಿಮ ಟೆಸ್ಟ್: ಜುಲೈ 31ರಿಂದ ಆಗಸ್ಟ್ 4ರವರೆಗೆ, ಕೆನ್ನಿಂಗ್ಟನ್ ಓವಲ್, ಲಂಡನ್.
(ಈ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಮಧ್ನಾಹ್ನ 3.30ಕ್ಕೆ ಸರಿಯಾಗಿ ಆರಂಭವಾಗಲಿವೆ.)
ತಂಡಗಳು:
ಭಾರತ: ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್ ಮತ್ತು ಹರ್ಷೀತ್ ರಾಣಾ.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಾಕ್ ಕ್ರಾಲಿ, ಕ್ರಿಸ್ ವೋಕ್ಸ್, ಜೇಕಬ್ ಬೆಥೆಲ್, ಜೇಮಿ ಓವರ್‌ಟನ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ಓಲಿ ಪೋಪ್ (ವಿಕೆಟ್ ಕೀಪರ್), ಬ್ರೈಡನ್ ಕಾರ್ಸ್, ಜೋಶ್ ಟಾಂಗ್, ಸ್ಯಾಮ್ ಕುಕ್, ಶೋಯಬ್ ಬಷೀರ್.
ಭಾರತ vs ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ (ಅಂಕಿಅಂಶ):
ಇಂಗ್ಲೆಂಡ್ ಗೆಲುವು: 51
ಭಾರತ ಗೆಲುವು: 35
ಇಂಗ್ಲೆಂಡ್ ಸೋಲು: 35
ಭಾರತ ಸೋಲು: 51
ಡ್ರಾ: 50
ಫಲಿತಾಂಶ ಇಲ್ಲ: 0
ಅಗ್ರ ಬ್ಯಾಟರ್‌ಗಳು:
ಭಾರತ:
ಯಶಸ್ವಿ ಜೈಸ್ವಾಲ್: 712 ರನ್
ಬ್ಯಾಟಿಂಗ್ ಸರಾಸರಿ: 89
ಇಂಗ್ಲೆಂಡ್:
ಜೋ ರೂಟ್: 2,846 ರನ್
ಬ್ಯಾಟಿಂಗ್ ಸರಾಸರಿ: 58.08
ಅಗ್ರ ಬೌಲರ್‌ಗಳು:
ಭಾರತ: ಜಸ್‌ಪ್ರೀತ್ ಬೂಮ್ರಾ: 60 ವಿಕೆಟ್
ಇಂಗ್ಲೆಂಡ್: ಕ್ರಿಸ್ ವೋಕ್ಸ್: 23 ವಿಕೆಟ್
(ಮಾಹಿತಿ ಕೃಪೆ: ಐಸಿಸಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.