ADVERTISEMENT

ಟಾಸ್‌‌ಗೆ ಏನಾದರೂ ಸಲಹೆಗಳಿವೆಯೇ? ವಿರಾಟ್ ಕಾಲೆಳೆದ ಜಾಫರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2021, 10:54 IST
Last Updated 13 ನವೆಂಬರ್ 2021, 10:54 IST
ಚಿತ್ರ ಕೃಪೆ: Twitter/@WasimJaffer14
ಚಿತ್ರ ಕೃಪೆ: Twitter/@WasimJaffer14   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಇದುವರೆಗೆ ನಡೆದ ಎಲ್ಲ ಪಂದ್ಯಗಳಲ್ಲೂ ಟಾಸ್ ನಿರ್ಣಾಯಕ ಪಾತ್ರವಹಿಸಿದೆ. ಟಾಸ್ ಗೆದ್ದ ತಂಡ ಪಂದ್ಯ ಗೆಲ್ಲುವ ಅವಕಾಶ ಹೆಚ್ಚಿದೆ.

ಇದನ್ನೇ ಉಲ್ಲೇಖ ಮಾಡಿರುವ ವಾಸೀಂ ಜಾಫರ್, ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ADVERTISEMENT

ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಬೌಂಡರಿ ಗೆರೆಯ ಬಳಿ ಕುಳಿತುಕೊಂಡಿರುವ ಹಳೆಯ ಚಿತ್ರವನ್ನು ಜಾಫರ್ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ. ಸನ್ನಿವೇಶ ಒಂದರಲ್ಲಿ ವಿಶ್ವಕಪ್ ಗೆಲುವಿಗಾಗಿ ಗೆಳೆಯ ಕೇನ್‌ ಅವರಿಗೆ ಕೊಹ್ಲಿ ಶುಭ ಹಾರೈಸುತ್ತಾರೆ. ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುವ ಕೇನ್, ಟಾಸ್‌ಗೆ ಸಲಹೆಗಳಿವೆಯೇ? ಎಂದು ಪ್ರಶ್ನಿಸುತ್ತಾರೆ.

ಅದೇ ಚಿತ್ರದ ಕೆಳಗಡೆಯಸನ್ನಿವೇಶದಲ್ಲಿ ಕೊಹ್ಲಿ ಹಾಗೂ ಕೇನ್ ಮುಗುಳ್ನಗೆಯ ಚಿತ್ರವನ್ನು ಹಂಚಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಟಾಸ್ ಅದೃಷ್ಟ ಕೈಕೊಟ್ಟಿರುವುದು ಹಿನ್ನಡೆಯಾಗಿತ್ತು. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಟಾಸ್ ಗೆಲ್ಲುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಪರಿಣಾಮ ಭಾರತ ಹೀನಾಯ ಸೋಲು ಅನುಭವಿಸಿತ್ತು.

ಬಹುತೇಕ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಮೊದಲು ಬೌಲಿಂಗ್ ಆಯ್ಕೆಮಾಡಿಕೊಂಡಿವೆ. ತೇವಾಂಶದಿಂದಾಗಿ ಬೌಲರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.